ಮೂವ್‌ಮೆಂಟ್ ಚಾರ್ಟರ್/ ಪರಿಚಯ
This was a historical draft of the Wikimedia Movement Charter. The latest version of the Charter that is up for a global ratification vote from June 25 to July 9, 2024 is available in the main Meta page. We thank the stakeholders of the Wikimedia movement for their feedback and insights in producing this draft. |
ವಿಕಿಮೀಡಿಯಾ ಚಳುವಳಿ ಒಂದು ಅಂತರಾಷ್ಟ್ರೀಯ ಮತ್ತು ಸಾಮಾಜಿಕ-ಸಾಂಸ್ಕೃತಿಕ ಆಂದೋಲನವಾಗಿದೆ. ಉಚಿತ ಜ್ಞಾನವನ್ನು ಇಡೀ ಜಗತ್ತಿಗೆ ಹರಡುವುದೇ ಇದರ ಉದ್ದೇಶ. ವಿಕಿಮೀಡಿಯಾ ಮೂವ್‌ಮೆಂಟ್ ಚಾರ್ಟರ್ ಈ ಆಂದೋಲನದಲ್ಲಿ ಭಾಗವಹಿಸುವವರ ಮೌಲ್ಯಗಳು, ಹಕ್ಕುಗಳು, ಸಂಬಂಧಗಳು ಮತ್ತು ಪರಸ್ಪರ ಜವಾಬ್ದಾರಿಗಳನ್ನು ಹೇಳುತ್ತದೆ. ಚಾರ್ಟರ್ ಎಲ್ಲಾ ವೈಯಕ್ತಿಕ ಮತ್ತು ಸಾಂಸ್ಥಿಕ ಭಾಗವಹಿಸುವವರಿಗೆ, ಚಳುವಳಿ ಘಟಕಗಳಿಗೆ, ಯೋಜನೆಗಳಗೆ ಮತ್ತು ವಿಕಿಮೀಡಿಯಾ ಚಳುವಳಿಯೊಂದಿಗೆ ಅಧಿಕೃತವಾಗಿ ಸಂಬಂಧ ಹೊಂದಿರುವ ಆನ್‌ಲೈನ್ ಮತ್ತು ಆಫ್‌ಲೈನ್ ತಾಣಗಳಿಗೆ ಅನ್ವಯಿಸುತ್ತದೆ.
ವಿಕಿಮೀಡಿಯಾ ಚಳುವಳಿ ಮತ್ತು ಅದರ ಮೌಲ್ಯಗಳನ್ನು ವ್ಯಾಖ್ಯಾನಿಸುವ ಮೂಲಕ, ಚಾರ್ಟರ್ ಚಳುವಳಿಯ ಪಾಲುದಾರರು ಪರಸ್ಪರ ಸಹಕರಿಸುವ ಗುರಿಯನ್ನು ಹೊಂದಿದೆ. ಇದರ ಉಪಯೋಗವೆನೆಂದರೆ:
- ಪರಸ್ಪರ ಸೇರಿರುವ ಭಾವನೆಯನ್ನು ಮೂಡಿಸುವುದು.
- ಉಚಿತ ಜ್ಞಾನದ ಮುಂದುವರಿದ ಸೃಷ್ಟಿ ಮತ್ತು ಲಭ್ಯತೆಯನ್ನು ಭದ್ರಪಡಿಸಿಕೊಳ್ಳಲು, ಬೆಳವಣಿಗೆ, ವಿಸ್ತರಣೆ ಮತ್ತು ಭವಿಷ್ಯದ ಸಾಧ್ಯತೆಗಳಿಗಾಗಿ ಹಂಚಿಕೆಯ ಕಾರ್ಯತಂತ್ರವನ್ನು ರೂಪಿಸುವುದು.
- ದಾನಿಗಳ ಹಕ್ಕುಗಳನ್ನು ಮತ್ತು ಚಳವಳಿಯ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದು.
- ನಿರ್ಧಾರ/ತೀರ್ಮಾನ ತೆಗೆದುಕೊಳ್ಳುವಿಕೆಯನ್ನು ನಿರ್ದೇಶಿಸುವುದು ಮತ್ತು
- ಚಾರ್ಟರ್ ಚಳುವಳಿಯ ಪಾಲುದಾರರ ನಡುವಿನ ಸಂಘರ್ಷವನ್ನು ಕಡಿಮೆ ಮಾಡುವುದು.
ತಿದ್ದುಪಡಿ ವಿಭಾಗದ ಪ್ರಕಾರ ಚಾರ್ಟರ್ ಅನ್ನು ಅಗತ್ಯವಿದ್ದರೆ ತಿದ್ದುಪಡಿ ಮಾಡಬಹುದು.
ಮೌಲ್ಯಗಳು
ವಿಕಿಮೀಡಿಯಾ ಚಳವಳಿಯು ಜ್ಞಾನಕ್ಕೆ ವಾಸ್ತವಿಕ, ಪರಿಶೀಲಿಸಬಹುದಾದ, ಮುಕ್ತ ಮತ್ತು ಸಮಗ್ರ ವಿಧಾನಗಳನ್ನು ಅಳವಡಿಸಿಕೊಂಡಿದೆ. ಇದು ನಮ್ಮ ಎಲ್ಲಾ ಕ್ರಿಯೆಗಳಿಗೆ ಮಾರ್ಗದರ್ಶನ ನೀಡುವ ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಡುತ್ತದೆ. ಈ ಹಂಚಿಕೆಯ ಮೌಲ್ಯಗಳನ್ನು ಎಲ್ಲಾ ನಿರ್ಧಾರ-ಮಾಡುವಿಕೆಯು ಪ್ರತಿಬಿಂಬಿಸುವ ಅಗತ್ಯವಿದೆ. ಚಳುವಳಿಗೆ ಮೂಲಭೂತ ಧ್ಯೇಯವನ್ನು ಪೂರೈಸಲು ಮತ್ತು ಜಾಗತಿಕವಾಗಿ ವಿಕಿಮೀಡಿಯಾ ಭಾಗವಹಿಸುವವರನ್ನು ಸಶಕ್ತಗೊಳಿಸಲು ಮೌಲ್ಯಗಳನ್ನು ಸಮತೋಲನಗೊಳಿಸುವ ಅಭ್ಯಾಸದ ಅಗತ್ಯವಿದೆ.
ಮೌಲ್ಯಗಳು ನಮ್ಮ ಮೂಲದಲ್ಲಿ ಈಗಾಗಲೇ ಒಳಗೊಂಡಿವೆ ಮತ್ತು ನಮ್ಮ ಭವಿಷ್ಯಕ್ಕಾಗಿ ಮೌಲ್ಯಗಳನ್ನು ಅಭಿವೃದ್ಧಿಪಡಿಸಿ ವಿಸ್ತರಿಸುವ ಅಗತ್ಯವಿದೆ. ಈ ಮೌಲ್ಯಗಳು ಜ್ಞಾನದ ಹಂಚಿಕೆಯನ್ನು ಸಹಯೋಗದ ಪ್ರಯತ್ನವೆಂದು ಗುರುತಿಸುತ್ತವೆ.
ಉಚಿತ ಜ್ಞಾನ
ವಿಕಿಮೀಡಿಯಾ ಚಳುವಳಿಯು ತಾನು ಉತ್ಪಾದಿಸುವ ಎಲ್ಲಾ ವಿಷಯಗಳನ್ನು, ಅದರ ಎಲ್ಲಾ ತಂತ್ರಾಂಶಗಳನ್ನು ಮತ್ತು ಅದರ ಎಲ್ಲಾ ವೇದಿಕೆಗಳಿಗೆ ಪ್ರವೇಶವನ್ನು ಹಂಚಿಕೊಳ್ಳಲು ಮುಕ್ತ ಪರವಾನಗಿಯನ್ನು ಬಳಸುತ್ತದೆ. ಕೆಲವು ಬಾಹ್ಯ ವಿಚಾರಗಳನ್ನು ವಿವಿಧ ಪರವಾನಗಿಗಳ ಅಡಿಯಲ್ಲಿ ಸೇರಿಸಲಾಗಿದೆ. ಇದು ಉಚಿತ ಜ್ಞಾನದ ಕ್ಷೇತ್ರಗಳನ್ನು ವಿಸ್ತರಿಸುವ ಮೂಲಕ, ಜ್ಞಾನವನ್ನು ಸೆರೆಹಿಡಿಯುವ ಮತ್ತು ಹಂಚಿಕೊಳ್ಳುವ ಹೊಸ ಮತ್ತು ವಿಕಸನಗೊಳ್ಳುತ್ತಿರುವ ರೂಪಗಳನ್ನು ಸಂಯೋಜಿಸುವ ಮೂಲಕ ಮತ್ತು ಬೆಳೆಯುತ್ತಿರುವ ವೈವಿಧ್ಯತೆಯನ್ನು ಸಂಯೋಜಿಸುವ ಮೂಲಕ ತನ್ನ ಧ್ಯೇಯವನ್ನು ಗಾಢವಾಗಿಸಲು ಬದ್ಧವಾಗಿದೆ.
ಸ್ವಾಯತ್ತತೆ
ವಿಕಿಮೀಡಿಯಾ ಚಳುವಳಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶ್ರಮಿಸುತ್ತದೆ. ಅದು ಉಚಿತ ಜ್ಞಾನದ ಧ್ಯೇಯದಿಂದ ಮಾರ್ಗದರ್ಶನ ಪಡೆಯುತ್ತದೆಯೇ ಹೊರತು ಪಕ್ಷಪಾತದಿಂದ ಅಲ್ಲ. ಈ ಚಳುವಳಿಯು ವಾಣಿಜ್ಯ, ರಾಜಕೀಯ, ಇತರ ವಿತ್ತೀಯ ಅಥವಾ ಪ್ರಚಾರದ ಪ್ರಭಾವಗಳಿಗೆ ತನ್ನ ಉದ್ದೇಶದ ಬಗ್ಗೆ ರಾಜಿ ಮಾಡಿಕೊಳ್ಳಲು ನಿರಾಕರಿಸುತ್ತದೆ.
ಅಧೀನತೆ ಮತ್ತು ಸ್ವಯಂ-ಸಂಘಟನೆ
ವಿಕಿಮೀಡಿಯಾ ಮೂವ್‌ಮೆಂಟ್ ತನ್ನ ಸ್ವಯಂಸೇವಕರ ಮೂಲಕ ತಕ್ಷಣದ ಅಥವಾ ಕಡಿಮೆ ಸಂಭವನೀಯ ಮಟ್ಟದ ಭಾಗವಹಿಸುವಿಕೆಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಪ್ರಪಂಚದಾದ್ಯಂತದ ಆನ್‌ಲೈನ್ ಮತ್ತು ಆಫ್‌ಲೈನ್ ಸಮುದಾಯಗಳು ಅನುದಾನ ತತ್ವದ ಮೂಲಕ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸ್ವ-ಆಡಳಿತವನ್ನು ಬೆಂಬಲಿಸುವುದು ಮತ್ತು ಸ್ವಾಯತ್ತತೆಯ ಸಾಮರ್ಥ್ಯವು ಜಾಗತಿಕ ಚಳುವಳಿಯ ಮೌಲ್ಯಗಳ ಮಹತ್ವದ ಅಂಶಗಳಾಗಿವೆ.
ನ್ಯಾಯಬದ್ದತೆ
ವಿಕಿಮೀಡಿಯಾ ಚಳವಳಿಯು ಜ್ಞಾನದ ಸಮಾನತೆಗೆ ವೈವಿಧ್ಯಮಯ ಸವಾಲುಗಳನ್ನು ಗುರುತಿಸುತ್ತದೆ ಮತ್ತು ಅನೇಕ ಮುಕ್ತ ಜ್ಞಾನ ಸಮುದಾಯಗಳು ಎದುರಿಸುವ ಐತಿಹಾಸಿಕ, ಸಾಮಾಜಿಕ, ರಾಜಕೀಯ ಮತ್ತು ಇತರ ರೀತಿಯ ಅಸಮಾನತೆ ಮತ್ತು ತಪ್ಪು ನಿರೂಪಣೆಯನ್ನು ಜಯಿಸಲು ಅವರನ್ನು ಸಬಲಗೊಳಿಸಲು ಶ್ರಮಿಸುತ್ತದೆ. ಆಂದೋಲನವು ಜ್ಞಾನದಲ್ಲಿ ಸಮಾನತೆಯನ್ನು ಸಾಧಿಸಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ವಿಕೇಂದ್ರೀಕೃತ ಆಡಳಿತ ಮತ್ತು ಸಮುದಾಯದ ಸಬಲೀಕರಣದ ಮೂಲಕ ಸಂಪನ್ಮೂಲಗಳನ್ನು ನಿಯೋಜಿಸಲು ಈ ಆಂದೋಲನದಿಂದ ಸಾದ್ಯವಾಗುತ್ತದೆ.
ಒಳಗೊಳ್ಳುವಿಕೆ
ವಿಕಿಮೀಡಿಯಾ ಯೋಜನೆಗಳು ಅನೇಕ ಭಾಷೆಗಳಲ್ಲಿ ಅಭಿವೃದ್ಧಿ ಹೊಂದಿದ್ದು, ಅನೇಕ ಪ್ರದೇಶಗಳು ಮತ್ತು ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತವೆ. ಚಳುವಳಿಯಲ್ಲಿ ಭಾಗವಹಿಸುವವರ ವೈವಿಧ್ಯತೆಯನ್ನು ಪರಸ್ಪರ ಗೌರವಿಸುವುದು ಎಲ್ಲಾ ಚಟುವಟಿಕೆಗಳಿಗೆ ಆಧಾರವಾಗಿದೆ. ಇದನ್ನು ಸುರಕ್ಷತೆ ಮತ್ತು ಒಳಗೊಳ್ಳುವಿಕೆಯನ್ನು ಬೆಂಬಲಿಸುವ ಕ್ರಮಗಳ ಮೂಲಕ ಜಾರಿಗೊಳಿಸಲಾಗುತ್ತದೆ. ವಿಕಿಮೀಡಿಯಾ ಚಳುವಳಿಯು ವೈವಿಧ್ಯತೆಯ ಸಾಮಾನ್ಯ ಸ್ಥಳವನ್ನು ಒದಗಿಸಲು ಬದ್ಧವಾಗಿದೆ, ಅಲ್ಲಿ ಮಿಷನ್ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವ ಪ್ರತಿಯೊಬ್ಬರೂ ಒಂದೇ ಕೇಂದ್ರಿತ ದೃಷ್ಟಿಕೋನಯಲ್ಲಿ ಮುನ್ನಡೆಯಬಹುದು. ಈ ಅಂತರ್ಗತ ಸ್ಥಳವು ತಂತ್ರಜ್ಞಾನದ ಮೂಲಕ ವೈವಿಧ್ಯಮಯ ವಿಶೇಷ ಅಗತ್ಯಗಳಿಗಾಗಿ ಪ್ರವೇಶವನ್ನು ಉತ್ತೇಜಿಸುತ್ತದೆ.
ಸುರಕ್ಷತೆ
ವಿಕಿಮೀಡಿಯಾ ಚಳುವಳಿಯು, ಚಳುವಳಿಯಲ್ಲಿ ಭಾಗವಹಿಸುವವರ ಯೋಗಕ್ಷೇಮ, ಭದ್ರತೆ ಮತ್ತು ಗೌಪ್ಯತೆಗೆ ಆದ್ಯತೆ ನೀಡುತ್ತದೆ. ಇದು ಪರಿಸರ ವ್ಯವಸ್ಥೆಯಲ್ಲಿ ಉಚಿತ ಜ್ಞಾನದಲ್ಲಿ ಭಾಗವಹಿಸಲು ಅಗತ್ಯವಾದ ವೈವಿಧ್ಯತೆ, ಒಳಗೊಳ್ಳುವಿಕೆ, ಸಮಾನತೆ ಮತ್ತು ಪಾಲುದಾರಿಕೆಗಳನ್ನು ಉತ್ತೇಜಿಸುವ ಸುರಕ್ಷಿತ ಆನ್ಲೈನ್ ಮಾಹಿತಿ ವಾತಾವರಣವನ್ನು ಖಾತ್ರಿಪಡಿಸುತ್ತದೆ. ಆನ್ಲೈನ್ ಮತ್ತು ಆಫ್ಲೈನ್ ತಾಣಗಳೆರಡರಲ್ಲೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಆದ್ಯತೆಯಾಗಿದೆ. ಸಮಗ್ರ ನೀತಿ ಸಂಹಿತೆಗಳ ಅನುಷ್ಠಾನ ಮತ್ತು ಜಾರಿ ಮತ್ತು ಈ ಚಟುವಟಿಕೆಗಳನ್ನು ಬೆಂಬಲಿಸಲು ಅಗತ್ಯವಾದ ಸಂಪನ್ಮೂಲಗಳ ಹೂಡಿಕೆಯ ಮೂಲಕ ಈ ಆದ್ಯತೆಯನ್ನು ಮುಂದುವರಿಸಲಾಗುತ್ತದೆ.
ಹೊಣೆಗಾರಿಕೆ
ವಿಕಿಮೀಡಿಯಾ ಆಂದೋಲನವು ವಿಕಿಮೀಡಿಯಾ ಯೋಜನೆಗಳು ಮತ್ತು ಚಳುವಳಿ ಸಂಸ್ಥೆಗಳನ್ನು ಪ್ರತಿನಿಧಿಸುವ ಸಮುದಾಯದ ಸ್ವತಃ ಜವಾಬ್ದಾರಿಯನ್ನು ನಾಯಕತ್ವದ ಮೂಲಕ ಹೊಂದಿದೆ. ಇದನ್ನು ಪಾರದರ್ಶಕ ನಿರ್ಧಾರ, ಸಂವಾದ, ಸಾರ್ವಜನಿಕ ಸೂಚನೆ, ಚಟುವಟಿಕೆಗಳ ವರದಿ ಮತ್ತು ಕಾಳಜಿಯ ಜವಾಬ್ದಾರಿಯನ್ನು ಎತ್ತಿಹಿಡಿಯುವ ಮೂಲಕ ಕಾರ್ಯಗತಗೊಳಿಸಲಾಗುತ್ತದೆ.
ಸ್ಥಿತಿಸ್ಥಾಪಕತ್ವ
ವಿಕಿಮೀಡಿಯಾ ಚಳುವಳಿಯು ನಾವೀನ್ಯತೆ ಮತ್ತು ಪ್ರಯೋಗಗಳ ಮೂಲಕ ಅಭಿವೃದ್ಧಿ ಹೊಂದುತ್ತದೆ ಮತ್ತು ಉಚಿತ ಜ್ಞಾನದ ವೇದಿಕೆ ಏನಾಗಬೇಕು ಎಂಬುದರ ಬಗ್ಗೆ ತನ್ನ ದೃಷ್ಟಿಕೋನವನ್ನು ನಿರಂತರವಾಗಿ ನವೀಕರಿಸುತ್ತದೆ. ಈ ಚಳುವಳಿಯು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಮತ್ತು ಅಭ್ಯಾಸಗಳನ್ನು ಅನುಸರಿಸುತ್ತದೆ, ಮತ್ತು ಅವುಗಳನ್ನು ಬೆಂಬಲಿಸಲು ಮತ್ತು ಚಾಲನೆಗೊಳಿಸಲು ಅರ್ಥಪೂರ್ಣ ಮಾಪನ-ಆಧಾರಿತ ಪುರಾವೆಗಳನ್ನು ಬಳಸುತ್ತದೆ.