Jump to content

Wikimedia Foundation elections/2021/2021-08-27/Second board voter e-mail/kn

From Meta, a Wikimedia project coordination wiki
This page is a translated version of the page Wikimedia Foundation elections/2021/2021-08-27/Second board voter e-mail and the translation is 100% complete.

From: ವಿಕಿಮೀಡಿಯಾ ಫೌಂಡೇಶನ್ ಚುನಾವಣಾ ಸಮಿತಿ <board-elections@lists.wikimedia.org>

ವಿಕಿಮೀಡಿಯಾ ಫೌಂಡೇಶನ್ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಮರೆಯಬೇಡಿ

ಆತ್ಮೀಯ $USERNAME,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ.

$ACTIVEPROJECT ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. ಈ ಕೂಡಲೇ [$SERVER/wiki/Special:SecurePoll/vote/Wikimedia_Foundation_Board_Elections_2021 $ACTIVEPROJECT ಪುಟದಲ್ಲಿರುವ SecurePoll]ನಲ್ಲಿ ಮತ ಚಲಾಯಿಸಿ.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ.

ಧನ್ಯವಾದಗಳೊಂದಿಗೆ,

ಚುನಾವಣಾ ಸಮಿತಿ

ನೀವು ವಿಕಿಮೀಡಿಯಾ ಫೌಂಡೇಶನ್‌ಗೆ ಇದೇ ಇಮೇಲ್ ವಿಳಾಸದ ಮೂಲಕ ನೋಂದಾಯಿಸಿಕೊಂಡಿರುವ ಕಾರಣ, ನಿಮಗೆ ಈ ಇಮೇಲ್ ಕಳುಹಿಸಿದ್ದೇವೆ. ಚುನಾವಣೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಯಾವುದೇ ಇಮೇಲ್ ಪಡೆಯದಿರಲು, ನಿಮ್ಮ ಯೂಸರ್ ನೇಮನ್ನು ವಿಕಿಮೀಡಿಯಾ ನೋ ಮೇಲ್ ಲಿಸ್ಟ್‌ಗೆ ಸೇರಿಸಿ.

Plain text version

ಆತ್ಮೀಯ $USERNAME,

ನೀವು ಈ ಇಮೇಲ್ ಸ್ವೀಕರಿಸುತ್ತಿರುವುದು ಯಾಕೆಂದರೆ, ನೀವು ವಿಕಿಮೀಡಿಯಾ ಫೌಂಡೇಶನ್‌ನ 2021ರ ಬೋರ್ಡ್ ಆಫ್ ಟ್ರಸ್ಟೀಸ್ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದೀರಿ. ಈ ಚುನಾವಣೆಯು ಆಗಸ್ಟ್ 18, 2021ರಂದು ಶುರುವಾಗಿದ್ದು, ಆಗಸ್ಟ್ 31, 2021ಕ್ಕೆ ಕೊನೆಗೊಳ್ಳಲಿದೆ.

$ACTIVEPROJECT ತರಹದ ಹಲವಾರು ಪ್ರಾಜೆಕ್ಟುಗಳನ್ನು ನಿರ್ವಹಿಸುವ ವಿಕಿಮೀಡಿಯಾ ಫೌಂಡೇಶನ್ ಅನ್ನು ಬೋರ್ಡ್ ಆಫ್ ಟ್ರಸ್ಟೀಸ್ ಮುನ್ನಡೆಸುತ್ತದೆ. ಈ ಬೋರ್ಡ್, ವಿಕಿಮೀಡಿಯಾ ಫೌಂಡೇಶನ್‌ನ ನಿರ್ಣಯ ತೆಗೆದುಕೊಳ್ಳುವ ಘಟಕವಾಗಿದೆ. ಬೋರ್ಡ್ ಆಫ್ ಟ್ರಸ್ಟೀಸ್ ಬಗ್ಗೆ ಇನ್ನಷ್ಟು ತಿಳಿಯಿರಿ: <https://meta.wikimedia.org/wiki/Wikimedia_Foundation_Board_of_Trustees/Overview>.

ಈ ವರ್ಷ, ಸಮುದಾಯ ಮತದಾನದ ಮೂಲಕ ನಾಲ್ಕು ಸ್ಥಾನಗಳ ಸದಸ್ಯರನ್ನು ಆರಿಸಬೇಕಿದೆ. ಜಗತ್ತಿನಾದ್ಯಂತ 19 ಅಭ್ಯರ್ಥಿಗಳು ಈ ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. 2021ರ ಬೋರ್ಡ್ ಆಫ್ ಟ್ರಸ್ಟೀಸ್ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ: <https://meta.wikimedia.org/wiki/Wikimedia_Foundation_elections/2021/Candidates#Candidate_Table>

ನಮ್ಮ ವಿವಿಧ ಸಮುದಾಯಗಳ 70,000 ಸದಸ್ಯರನ್ನು ಮತದಾನ ಮಾಡುವಂತೆ ಕೋರಲಾಗಿದೆ. ಅದರಲ್ಲಿ ನೀವೂ ಒಬ್ಬರು! ಆಗಸ್ಟ್ 31ರ 23:59 UTC ತನಕ ಮಾತ್ರವೇ ಮತ ಚಲಾಯಿಸಲು ಅವಕಾಶವಿದೆ. ಈ ಕೂಡಲೇ $ACTIVEPROJECT ಪುಟದಲ್ಲಿರುವ SecurePollನಲ್ಲಿ ಮತ ಚಲಾಯಿಸಿ: <$SERVER/wiki/Special:SecurePoll/vote/Wikimedia_Foundation_Board_Elections_2021>.

ನೀವು ಈಗಾಗಲೇ ಮತ ಚಲಾಯಿಸಿದ್ದರೆ, ಧನ್ಯವಾದಗಳು. ದಯವಿಟ್ಟು ಈ ಇಮೇಲನ್ನು ಕಡೆಗಣಿಸಿ. ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಖಾತೆಗಳಿದ್ದರೂ, ಒಂದು ಸಲ ಮಾತ್ರವೇ ಮತ ಚಲಾಯಿಸಬಹುದು.

ಈ ಚುನಾವಣೆ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಿರಿ: <https://meta.wikimedia.org/wiki/Special:MyLanguage/Wikimedia_Foundation_elections/2021/Board_of_Trustees>.

ಧನ್ಯವಾದಗಳೊಂದಿಗೆ,

ಚುನಾವಣಾ ಸಮಿತಿ

--

ನೀವು ವಿಕಿಮೀಡಿಯಾ ಫೌಂಡೇಶನ್‌ಗೆ ಇದೇ ಇಮೇಲ್ ವಿಳಾಸದ ಮೂಲಕ ನೋಂದಾಯಿಸಿಕೊಂಡಿರುವ ಕಾರಣ, ನಿಮಗೆ ಈ ಇಮೇಲ್ ಕಳುಹಿಸಿದ್ದೇವೆ. ಚುನಾವಣೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಯಾವುದೇ ಇಮೇಲ್ ಪಡೆಯದಿರಲು, ನಿಮ್ಮ ಯೂಸರ್ ನೇಮನ್ನು ವಿಕಿಮೀಡಿಯಾ ನೋ ಮೇಲ್ ಲಿಸ್ಟ್‌ಗೆ ಸೇರಿಸಿ <https://meta.wikimedia.org/wiki/Wikimedia_nomail_list>.