Jump to content

ವಿಕಿಕಾನ್ಫರೆನ್ಸ್ ಇಂಡಿಯಾ ೨೦೨೩

From Meta, a Wikimedia project coordination wiki
This page is a translated version of the page WikiConference India 2023 and the translation is 40% complete.
Outdated translations are marked like this.

೨೮ - ೩೦, ಎಪ್ರಿಲ್, ೨೦೨೩
ಹೈದರಾಬಾದ್, ಭಾರತ


ಮುಖ್ಯ ಪುಟ ಅನುವಾದ ಗೆಳೆಯ ಪೂರ್ವ ಸಮ್ಮೇಳನ ಕಾರ್ಯಕ್ರಮ ಸಂಪರ್ಕಿಸಿ ತಂಡ ಒಡನಾಟದ ನೀತಿ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ವಿಕಿಕಾನ್ಫರೆನ್ಸ್ ಇಂಡಿಯಾ ೨೦೨೩ ಒಂದು ರಾಷ್ಟ್ರಮಟ್ಟದ ಸಮ್ಮೇಳನವಾಗಿದೆ. ಇದು ಭಾರತೀಯ ಭಾಷಾ ವಿಕಿಮೀಡಿಯ ಯೋಜನೆಗಳು ಮತ್ತು ಭಾರತ ಹಾಗೂ ಕೆಲವು ದಕ್ಷಿಣ ಏಶಿಯಾ ಪ್ರಾಂತ್ಯಗಳಲ್ಲಿನ ಚಳುವಳಿಗಳಿಗೆ ಸಂಬಂಧಿತ ಇತರ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ವಿಕಿಮೀಡಿಯನ್ನರಿಗೆ ಮತ್ತು ಪಾಲುದಾರರಿಗೆ ಒಂದು ಸಾಮಾನ್ಯವೇದಿಕೆಯನ್ನು ಒದಗಿಸುತ್ತದೆ. ಭೇಟಿ, ಸಂಪರ್‍ಕ ಮಾಡಲು ಮತ್ತು ಮಾಹಿತಿ, ಸುದ್ದಿ, ಕಲಿಕೆ, ಉತ್ತಮ ಅಭ್ಯಾಸಗಳು ಮತ್ತು ಸವಾಲುಗಳ ಬಗ್ಗೆ ಹಂಚಿಕೊಳ್ಳಲು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಒಂದು ಪ್ರದೇಶವಾಗಿ ಚರ್ಚಿಸಲು ಇದೊಂದು ಅವಕಾಶವಾಗಿದೆ. ಈ ಸಮ್ಮೇಳನವು ೨೦೨೩ ಏಪ್ರಿಲ್ ೨೮ರಿಂದ ೩೦ರವರೆಗೆ ಹೈದರಾಬಾದ್ ನಗರದಲ್ಲಿ ನಡೆಯಲಿದೆ.

WCI ೨೦೨೩ರ ವಿಷಯವಸ್ತು

ಈ ಬಾರಿಯ ವಿಕಿಕಾನ್ಫರೆನ್ಸ್ ಇಂಡಿಯಾದ ಥೀಮ್ Strengthening the bonds ಆಗಿರುತ್ತದೆ. ದಕ್ಷಿಣ ಏಶಿಯಾ ಪ್ರದೇಶದ ಕೆಲವು ಸಮುದಾಯಗಳ ಸದಸ್ಯರಿಗೆ ಪರಸ್ಪರ ಸಂಪರ್ಕ ಹೊಂದಲು, ತಮ್ಮ ಯೋಚನೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು, ಹಾಗೂ ತಮ್ಮ ತಮ್ಮ ಸಮುದಾಯಗಳ ಬೆಳವಣಿಗೆಗಾಗಿ ಒಟ್ಟಿಗೆ ಸೇರಿ ಕೆಲಸ ಮಾಡಲು ಈ ಸಮ್ಮೇಳನವು ಅವಕಾಶಮಾಡಿಕೊಡುತ್ತದೆ.

ಹಿನ್ನೆಲೆ ಮತ್ತು ಉದ್ದೇಶ

೨೦೧೧ರಲ್ಲಿ ಮೊದಲಬಾರಿಗೆ ವಿಕಿಕಾನ್ಫರೆನ್ಸ್ ಇಂಡಿಯಾ ಆಯೋಜಿಸಲಾಯಿತು ಮತ್ತು ಎರಡನೆಯದು ೨೦೧೬ರಲ್ಲಿ ಚಂದೀಘಡದಲ್ಲಿ ನಡೆಸಲಾಯಿತು. ೨೦೨೦ರಲ್ಲಿ ನಡೆಸುವ ಮೂರನೇ ಸಮ್ಮೇಳನದ ಯೋಜನೆಯನ್ನು ಕೋವಿಡ್-೧೯ ಕಾರಣದಿಂದ ಹಿಂದೆಗೆದುಕೊಳ್ಳಲಾಯಿತು.

ಭಾರತದ ವಿಕಿಸಮುದಾಯಗಳನ್ನು ಮತ್ತು ದಕ್ಷಣ ಏಶಿಯಾ ಪ್ರದೇಶಗಳ ಇತರ ಇಂಡಿಕ್ ವಿಕಿಸಮುದಾಯಗಳನ್ನು ಒಂದೆಡೆ ತರುವುದರ ಮೂಲಕ ಸಮುದಾಯಗಳ ನಡುವೆ ಸಂಪರ್ಕಗಳನ್ನು ಬೆಳೆಸುವುದು ಹಾಗೂ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು ಈ ೨೦೨೩ರ ಸಮ್ಮೇಳನದ ಗುರಿಯಾಗಿರುತ್ತದೆ.

  • to promote, develop, strengthen, and support the collaboration between Wikimedia users, projects, communities, affiliates, and stakeholders in the region.
  • to support sharing the knowledge, experience and best practices among participants, and offer a space to improve their skills, discuss persistent issues and cherish each other’s work.
  • to support the growth of smaller communities by connecting them with experienced Wikimedians, established communities and affiliates.
  • to document the learning from various activities, which include projects, campaigns, events, etc. by various community members in the past four years, for later use.
  • to strategize for the next few years, on how we can together shape up the movement in India and contribute to the growth of the South Asia region at large.

ಟೈಮ್‍ಲೈನ್

  • ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮತ್ತು ಸೆಶನ್ ಗಳನ್ನು ನಡೆಸಿಕೊಡಲು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ೧೧ ನವೆಂಬರ್ ೨೦೨೨, ೦೦:೦೦ IST.
  • ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮತ್ತು ಸೆಶನ್ ಗಳನ್ನು ನಡೆಸಿಕೊಡಲು ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ೨೭ ನವೆಂಬರ್ ೨೦೨೨ರಿಂದ ೧೪ ಡಿಸೆಂಬರ್ ೨೦೨೨, ೨೩:೫೯ IST ಗೆ ವಿಸ್ತರಿಸಲಾಗಿದೆ.
  • ಸ್ಕಾಲರ್ಶಿಪ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ಸ್ಕಾಲರ್‌ಶಿಪ್‌ಗಳು ವಿಭಾಗವನ್ನು ನೋಡಿ.
  • ನಿಮ್ಮ ಸೆಶನ್ ಪ್ರಸ್ತಾವನೆಯನ್ನು ಸಲ್ಲಿಸಲು Session Submissions ವಿಭಾಗವನ್ನು ನೋಡಿ.

ಕಾರ್‍ಯಕ್ರಮದ ಸ್ಥಳ ಮತ್ತು ದಿನಾಂಕಗಳು

  • ಸ್ಥಳ: ಹೈದರಾಬಾದ್, ತಲಂಗಾಣ
  • ದಿನಾಂಕ: ೨೮-೩೦ ಏಪ್ರಿಲ್ ೨೦೨೩