ಮೂವ್ಮೆಂಟ್ ಚಾರ್ಟರ್/ತಿದ್ದುಪಡಿ
Appearance
This was a historical draft of the Wikimedia Movement Charter. The latest version of the Charter that is up for a global ratification vote from June 25 to July 9, 2024 is available in the main Meta page. We thank the stakeholders of the Wikimedia movement for their feedback and insights in producing this draft. |
ತಿದ್ದುಪಡಿ
ವಿಕಿಮೀಡಿಯಾ ಮೂವ್‌ಮೆಂಟ್ ಚಾರ್ಟರ್ ಅನ್ನು ಹಲವು ವರ್ಷಗಳ ಕಾಲ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರಣದಿಂದಾಗಿ, ಚಾರ್ಟರ್ಗೆ ತಿದ್ದುಪಡಿಗಳನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಾಡಲಾಗುವುದು. ಇದಕ್ಕೆ ಅಪವಾದವೆಂದರೆ ಸಣ್ಣ ಕಾಗುಣಿತ ಮತ್ತು ವ್ಯಾಕರಣ ಬದಲಾವಣೆಗಳು ಚಾರ್ಟರ್ ಪಠ್ಯದ ಅರ್ಥ ಅಥವಾ ಉದ್ದೇಶವನ್ನು ಬದಲಾಯಿಸುವುದಿಲ್ಲ
ತಿದ್ದುಪಡಿಗಳ ವರ್ಗಗಳು
- ಸಣ್ಣ ತಿದ್ದುಪಡಿಗಳು
- ಚಾರ್ಟರ್‌ನ ಅಥವಾ ಉದ್ದೇಶವನ್ನು ಬದಲಾಯಿಸದ ಕಾಗುಣಿತ ಮತ್ತು ವ್ಯಾಕರಣ ತಿದ್ದುಪಡಿಗಳು.
- ಜಾಗತಿಕ ಮಂಡಳಿಯ ಕಾರ್ಯ ಪ್ರಕ್ರಿಯೆಗಳ ಮೇಲೆ ಮಾತ್ರ ಪರಿಣಾಮ ಬೀರುವ ಬದಲಾವಣೆಗಳು.
- GC ಯ ಒಟ್ಟಾರೆ ಜವಾಬ್ದಾರಿಗಳು ಮತ್ತು ಸದಸ್ಯತ್ವವನ್ನು ಮಾರ್ಪಡಿಸುವ ಬದಲಾವಣೆಗಳು.
- ಚಳುವಳಿಯ ಮೌಲ್ಯಗಳನ್ನು ಮಾರ್ಪಡಿಸುವ ಬದಲಾವಣೆಗಳು ಅಥವಾ ಸ್ವಯಂಸೇವಕರ ಜವಾಬ್ದಾರಿಗಳು ಮತ್ತು ಹಕ್ಕುಗಳು,ಯೋಜನೆಗಳು, ಅಂಗಸಂಸ್ಥೆಗಳು, ಕೇಂದ್ರಗಳು, ವಿಕಿಮೀಡಿಯಾ ಫೌಂಡೇಶನ್, ಭವಿಷ್ಯದ ವಿಕಿಮೀಡಿಯಾ ಚಳುವಳಿ ಸಂಸ್ಥೆಗಳು ಮತ್ತು ವಿಶಾಲವಾದ ವಿಕಿಮೀಡಿಯಾ ಚಳುವಳಿ.
- ವಿಕಿಮೀಡಿಯಾ ಚಳುವಳಿ ಪ್ರಸ್ತಾಪಿಸಿದ ಬದಲಾವಣೆಗಳು
ತಿದ್ದುಪಡಿ ವರ್ಗ | ಪ್ರಕ್ರಿಯೆ | ಅನುಮೋದನೆ ಬದಲಾವಣೆ ಸಂಸ್ಥೆ | ಟಿಪ್ಪಣಿಗಳು' |
೧ | ಪ್ರಸ್ತಾವಿತ ಬದಲಾವಣೆಗೆ ಮೂರನೇ ಎರಡರಷ್ಟು(⅔)ಬೆಂಬಲ | ಜಾಗತಿಕ ಮಂಡಳಿ ಬೋರ್ಡ್ | |
೨ | ಪ್ರಸ್ತಾವಿತ ಬದಲಾವಣೆಗೆ ಮೂರನೇ ಎರಡರಷ್ಟು ಬೆಂಬಲ | ಜಾಗತಿಕ ಮಂಡಳಿಯ ಸಭೆ | ಸಮುದಾಯ ಸಮಾಲೋಚನೆ ಶಿಫಾರಸು |
೩ | ಕಡ್ಡಾಯ ಸಮುದಾಯ ಸಮಾಲೋಚನೆ, ಸಮಾಲೋಚನೆಯ ನಂತರ ಮತದಲ್ಲಿನ ಬದಲಾವಣೆಗೆ ಮೂರನೇ ಎರಡರಷ್ಟು (⅔) ಬೆಂಬಲ | ಜಾಗತಿಕ ಮಂಡಳಿಯ ಸಭೆ | |
೪ | ಚಳವಳಿಯಾದ್ಯಂತ ಮತ, ಬದಲಾವಣೆಗೆ ಬಹುಮತದ ಬೆಂಬಲ | ವಿಕಿಮೀಡಿಯಾ ಚಳುವಳಿ | WMF ಬೋರ್ಡ್ ಆಫ್ ಟ್ರಸ್ಟಿಗಳಿಂದ ಬೆಂಬಲ ಮತವನ್ನು ಒಳಗೊಂಡಂತೆ, ದೃಢೀಕರಣ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ನಿಕಟವಾಗಿ ಅನುಸರಿಸಲು ಮತದಾನದ ಕಾರ್ಯವಿಧಾನ |
೫ | ಮತದಾನಕ್ಕೆ ತೆರಳಲು ಪ್ರಸ್ತಾಪಗಳು ಮಾನದಂಡವನ್ನು ಪೂರೈಸಬೇಕು. ಚಳವಳಿಯಾದ್ಯಂತ ಮತ, ಬದಲಾವಣೆಗೆ ಬಹುಮತದ ಬೆಂಬಲ | ವಿಕಿಮೀಡಿಯಾ ಚಳುವಳಿ | WMF ಬೋರ್ಡ್ ಆಫ್ ಟ್ರಸ್ಟಿಗಳಿಂದ ಬೆಂಬಲ ಮತವನ್ನು ಒಳಗೊಂಡಂತೆ, ದೃಢೀಕರಣ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ನಿಕಟವಾಗಿ ಅನುಸರಿಸಲು ಮತದಾನದ ಕಾರ್ಯವಿಧಾನ |
ವಿಕಿಮೀಡಿಯಾ ಮೂವ್‌ಮೆಂಟ್ ಚಾರ್ಟರ್ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಪ್ರಕ್ರಿಯೆ
ಜಾಗತಿಕ ಮಂಡಳಿ ಬೋರ್ಡ್ ವರ್ಗ 1, 2, 3 ಅಥವಾ 4 ತಿದ್ದುಪಡಿಗಳನ್ನು ಪ್ರಸ್ತಾಪಿಸಬಹುದು.ಜಾಗತಿಕ ಮಂಡಳಿ ಸಭೆ ವರ್ಗ 2, 3 ಮತ್ತು 4 ತಿದ್ದುಪಡಿಗಳನ್ನು ಪ್ರಸ್ತಾಪಿಸಬಹುದು. ವರ್ಗ 5 ತಿದ್ದುಪಡಿಗಳನ್ನು ವಿಕಿಮೀಡಿಯಾ ಚಳುವಳಿಯ ಸದಸ್ಯರು ಪ್ರಸ್ತಾಪಿಸಿದ್ದಾರೆ.