ತಾಂತ್ರಿಕ/ಸುದ್ದಿ/೨೦೨೩/೦೬
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೦೬ (ಸೋಮವಾರ ೦೬ ಫೆಬ್ರವರಿ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-06
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ವೆಕ್ಟರ್ ೨೦೨೨ ಸ್ಕಿನ್ನಲ್ಲಿ, ಪೂರ್ಣ-ಅಗಲ ಟಾಗಲ್ ಬಳಸಿಕೊಂಡು ಲಾಗ್-ಔಟ್ ಮಾಡಿದ ಬಳಕೆದಾರರು ಪುಟಗಳನ್ನು ರಿಫ್ರೆಶ್ ಮಾಡಿದ ನಂತರ ಅಥವಾ ಹೊಸದನ್ನು ತೆರೆದ ನಂತರವೂ ತಮ್ಮ ಆಯ್ಕೆಯ ಸೆಟ್ಟಿಂಗ್ ಅನ್ನು ನೋಡಲು ಸಾಧ್ಯವಾಗುತ್ತದೆ. ವೆಕ್ಟರ್ 2022 ಡೀಫಾಲ್ಟ್ ಆಗಿರುವ ವಿಕಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. [೧]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೭ ಫೆಬ್ರವರಿ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೮ ಫೆಬ್ರವರಿ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೯ ಫೆಬ್ರವರಿ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಈ ಹಿಂದೆ, ಕೆಲವು ವಿಕಿಗಳು ಅವುಗಳ ಮುಖ್ಯ ಡೇಟಾಬೇಸ್ನ ಸ್ಥಳಾಂತರ ಕೆಲವು ನಿಮಿಷಗಳವರೆಗೆ ಓದಲು-ಮಾತ್ರ ಇರುತ್ತದೆ ಎಂದು ನಾವು ಘೋಷಿಸಿದ್ದೇವೆ. ಈ ಸ್ಥಳಾಂತರಗಳನ್ನು ಇನ್ನು ಮುಂದೆ ಪ್ರಕಟಿಸಲಾಗುವುದಿಲ್ಲ, ಏಕೆಂದರೆ ಓದಲು-ಮಾತ್ರ ಸಮಯವು ಮಹತ್ವದ್ದಾಗಿಲ್ಲ ಹಾಗೂ ಪ್ರತಿ ಮಂಗಳವಾರ ಮತ್ತು ಗುರುವಾರ 7AM UTC ಸಮಯದಲ್ಲಿ ಸ್ಥಳಾಂತರ ನಡೆಯುತ್ತಲೇ ಇರುತ್ತವೆ. [೨]
- ಎಲ್ಲಾ ವಿಕಿಗಳಾದ್ಯಂತ, ವೆಕ್ಟರ್ ೨೦೨೨ ಸ್ಕಿನ್ನಲ್ಲಿ, ಲಾಗ್-ಇನ್ ಮಾಡಿದ ಬಳಕೆದಾರರು ಹೊಸ ಸೈಡ್ ಮೆನು ನಲ್ಲಿ "ಇಲ್ಲಿ ಯಾವ ಲಿಂಕ್ಗಳು" ನಂತಹ ಪುಟ-ಸಂಬಂಧಿತ ಲಿಂಕ್ಗಳನ್ನು ನೋಡುತ್ತಾರೆ. ಇದನ್ನು ಪರದೆಯ ಇನ್ನೊಂದು ಬದಿಯಲ್ಲಿ ಪ್ರದರ್ಶಿಸಲಾಗುತ್ತದೆ. ಈ ಬದಲಾವಣೆಯನ್ನು ಈ ಹಿಂದೆ ಜೆಕ್, ಇಂಗ್ಲಿಷ್ ಮತ್ತು ವಿಯೆಟ್ನಾಮೀಸ್ ವಿಕಿಪೀಡಿಯಾಗಳಲ್ಲಿ ಮಾಡಲಾಗಿತ್ತು. [೩]
- ಸಮುದಾಯ ವಿಶ್ಲಿಸ್ಟ್ ಸಮೀಕ್ಷೆ 2023 ಸೋಮವಾರ, 6 ಫೆಬ್ರವರಿ 2023, 18:00 UTC ರಂದು ಹೊಸ ಪ್ರಸ್ತಾಪಗಳನ್ನು ಸ್ವೀಕರಿಸುವುದನ್ನು ನಿಲ್ಲುತ್ತದೆ. ಪ್ರತಿಪಾದಕರಿಗೆ ಅನುವಾದಗಳಿಗೆ ಸಮಯವನ್ನು ನೀಡಲು ಮತ್ತು ಪರಿಶೀಲಿಸಲು ಯಾವುದೇ ಸಂಪಾದನೆಗಳನ್ನು ಪೂರ್ಣಗೊಳಿಸಬೇಕು. ಫೆಬ್ರವರಿ 10 ಶುಕ್ರವಾರದಂದು ಮತದಾನ ಆರಂಭವಾಗಲಿದೆ.
ಭವಿಷ್ಯದ ಬದಲಾವಣೆಗಳು
ಡೆಸ್ಕ್ಟಾಪ್ ಮತ್ತು ಮೊಬೈಲ್ ಸೈಟ್ಗಳಲ್ಲಿ ಲೋಡ್ ಮಾಡಲು ಗ್ಯಾಜೆಟ್ಗಳು ಮತ್ತು ಬಳಕೆದಾರರ ಸ್ಕ್ರಿಪ್ಟ್ಗಳು ಬದಲಾಗುತ್ತವೆ. ಈ ಹಿಂದೆ ಡೆಸ್ಕ್ಟಾಪ್ ಸೈಟ್ನಲ್ಲಿ ಮಾತ್ರ ಲೋಡ್ ಹಾಗುತಿತ್ತು. ಈ ಬದಲಾವಣೆಯ ಮೊದಲು ವಿಕಿ ನಿರ್ವಾಹಕರು ಗ್ಯಾಜೆಟ್ ವ್ಯಾಖ್ಯಾನಗಳು ಅನ್ನು ಆಡಿಟ್ ಮಾಡಲು ಶಿಫಾರಸು ಮಾಡುತ್ತಾರೆ ಮತ್ತು ಮೊಬೈಲ್ನಲ್ಲಿ ಲೋಡ್ ಮಾಡದ ಯಾವುದೇ ಗ್ಯಾಜೆಟ್ಗಳಿಗೆ
skins=…
ಅನ್ನು ಸೇರಿಸುತ್ತಾರೆ. ಹೆಚ್ಚಿನ ವಿವರಗಳು ಲಭ್ಯವಿದೆ.
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.