ತಾಂತ್ರಿಕ/ಸುದ್ದಿ/೨೦೨೨/೩೭
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೩೭ (ಸೋಮವಾರ ೧೨ ಸೆಪ್ಟೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-37
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ತಾಂತ್ರಿಕ ಸುದ್ದಿ. ಈ ಬದಲಾವಣೆಗಳ ಕುರಿತು ದಯವಿಟ್ಟು ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಹುಡುಕಾಟ ಸರ್ವರ್ಗಳನ್ನು ಹೊಸ ಪ್ರಮುಖ ಆವೃತ್ತಿಗೆ ಅಪ್ಗ್ರೇಡ್ ಮಾಡಲಾಗಿದೆ. ಹುಡುಕಾಟದಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಗಮನಿಸಿದರೆ, ದಯವಿಟ್ಟು ಅವುಗಳನ್ನು ಫ್ಯಾಬ್ರಿಕೇಟರ್ ನಲ್ಲಿ ವರದಿ ಮಾಡಿ. [೧]
ಈ ವಾರದ ನಂತರ ಸಂಭವಿಸುವ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೧೩ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೪ ಸೆಪ್ಟಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೫ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಸಿಂಟ್ಯಾಕ್ಸ್ ಹೈಲೈಟ್ ಅನ್ನು ಈಗ ದುಬಾರಿ ಪಾರ್ಸರ್ ಫಂಕ್ಷನ್ ಎಂದು ಟ್ರ್ಯಾಕ್ ಮಾಡಲಾಗಿದೆ. ಒಂದೇ ಪುಟದಲ್ಲಿ ಕೇವಲ 500 ದುಬಾರಿ ಫಂಕ್ಷನ್ ಕರೆಗಳನ್ನು ಬಳಸಬಹುದು. ಮಿತಿಯನ್ನು ಮೀರಿದ ಪುಟಗಳನ್ನು ಟ್ರ್ಯಾಕಿಂಗ್ ವರ್ಗಕ್ಕೆ ಸೇರಿಸಲಾಗುತ್ತದೆ. [೨]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ