ಡಬ್ಲ್ಯುಎಂಎಫ್ ಜಾಗತಿಕ ನಿಷೇಧ ನೀತಿ
ಜಾಗತಿಕ ಸಂಸ್ಥೆಯ ನಿಷೇಧವು ಬಹು-ಯೋಜನೆಯ ದುರ್ನಡತೆಯನ್ನು ಪರಿಹರಿಸಲು ನಮ್ಮ ಬಳಕೆಯ ನಿಯಮಗಳಿಗೆ ಅನುಸಾರವಾಗಿ ಫೌಂಡೇಶನ್ ತೆಗೆದುಕೊಳ್ಳಬಹುದಾದ ಕಚೇರಿ ಕ್ರಮವಾಗಿದೆ. ಇದು ಎಲ್ಲಾ ವಿಕಿಮೀಡಿಯಾ ಸೈಟ್‌ಗಳ ಸಂಪಾದನೆ ಮತ್ತು ಓದುವ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಾರ್ವಜನಿಕರ ಕೊಡುಗೆ ಮತ್ತು ಸಂಭಾಷಣೆಗೆ ಅಡ್ಡಿಪಡಿಸುವ ನಿಷೇಧಿತ ನಡವಳಿಕೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ತಮ್ಮನ್ನು ಅಥವಾ ಇತರರನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಜಾಗತಿಕ ನಿಷೇಧವನ್ನು ಅನ್ವಯಿಸಲಾಗುತ್ತದೆ. ಇದು ಸಮುದಾಯದ ಜಾಗತಿಕ ನಿಷೇಧ ಪ್ರಕ್ರಿಯೆಯನ್ನು ಬದಲಿಸದೆ ಮಾತ್ರ ಪೂರಕಗೊಳಿಸುವ ಒಂದು ಅಸಾಮಾನ್ಯ ಕ್ರಿಯೆಯಾಗಿದೆ.
ಪ್ರತಿಷ್ಠಾನದ ಜಾಗತಿಕ ನಿಷೇಧವನ್ನು ಪರಿಗಣಿಸುವಾಗ ಮತ್ತು ಕಾರ್ಯಗತಗೊಳಿಸುವಾಗ ಟ್ರಸ್ಟ್ ಮತ್ತು ಸುರಕ್ಷತೆ ತಂಡವು ಅನುಸರಿಸುವ ಕಾರ್ಯವಿಧಾನಗಳನ್ನು ಸಂಬಂಧಿತ ಪ್ರಕ್ರಿಯೆ ಪುಟದ ಅಡಿಯಲ್ಲಿ ಕಾಣಬಹುದು.
ಬಳಕೆದಾರರು, ಯೋಜನೆಗಳು ಮತ್ತು ಸ್ವತಃ ಸುರಕ್ಷತೆ ಮತ್ತು ಗೌಪ್ಯತೆಗಾಗಿ, ವಿಕಿಮೀಡಿಯಾ ಫೌಂಡೇಶನ್ ಸೂಕ್ತವಾದಾಗ ಸಂಬಂಧಿತ ಅಧಿಕಾರಿಗಳಿಗೆ ಸಂಭಾವ್ಯ ಕ್ರಿಮಿನಲ್ ಉಲ್ಲಂಘನೆಗಳನ್ನು ಉಲ್ಲೇಖಿಸುತ್ತದೆ.
ಉದ್ದೇಶ ಮತ್ತು ವ್ಯಾಪ್ತಿ
ಸ್ಥಳೀಯ ಸಮುದಾಯ ಆಡಳಿತದ ಮಟ್ಟದಲ್ಲಿ ಕ್ರಮಗಳು ಸಾಕಷ್ಟಿಲ್ಲದಿರುವಾಗ ಅಥವಾ ಸಾಧ್ಯವಾಗದ ಸಂದರ್ಭಗಳಲ್ಲಿ ವಿಕಿಮೀಡಿಯಾ ಸಮುದಾಯದ ಸದಸ್ಯರು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುವುದು ಈ ನೀತಿಯ ಉದ್ದೇಶವಾಗಿದೆ.
ಜಾಗತಿಕ ಮತ್ತು ಯೋಜನಾ-ನಿರ್ದಿಷ್ಟ ನಿಷೇಧಗಳು ಸ್ಥಳೀಯ ವಿಕಿಮೀಡಿಯಾ ಸಮುದಾಯ ಆಡಳಿತ ಕಾರ್ಯವಿಧಾನಗಳನ್ನು ಸಹ ಜಾರಿಗೆ ತರುತ್ತವೆ.ಸಂಸ್ಥೆಯ ಜಾಗತಿಕ ನಿಷೇಧಗಳು ಆನ್-ವಿಕಿ ಪ್ರಕ್ರಿಯೆಗೆ ಬದಲಿಯಾಗಿಲ್ಲ. ಕಾನೂನುಬದ್ಧ ಆನ್-ವಿಕಿ ಪ್ರಕ್ರಿಯೆಯಿಂದ ಉಂಟಾಗುವ "ತಪ್ಪುಗಳನ್ನು" ಸರಿಪಡಿಸಲು ಇವುಗಳನ್ನು ಬಳಸಲಾಗುವುದಿಲ್ಲ. ಬಳಕೆಯ ನಿಯಮಗಳಲ್ಲಿ ವಿವರಿಸಿದಂತೆ ಎಲ್ಲಾ ವಿಕಿಮೀಡಿಯಾ ಯೋಜನೆಗಳಲ್ಲಿ ಸ್ಥಳೀಯ ನೀತಿಗಳು ಪ್ರಾಥಮಿಕವಾಗಿ ಉಳಿಯುತ್ತವೆ ಮತ್ತು ಸಂಸ್ಥೆಯ ಜಾಗತಿಕ ನಿಷೇಧಗಳು ಆ ಸ್ಥಳೀಯ ನೀತಿಗಳಿಗೆ ಪೂರಕವಾಗಿವೆ.ವಿಕಿಮೀಡಿಯಾ ಸಮುದಾಯ ಅಥವಾ ಸಾರ್ವಜನಿಕರ ಸುರಕ್ಷತೆಯನ್ನು ರಕ್ಷಿಸಲು ಮತ್ತು ಸೈಟ್‌ಗಳನ್ನು ಸಂರಕ್ಷಿಸಲು ವಿಕಿಮೀಡಿಯಾ ಸಂಸ್ಥೆ ಸ್ಥಳೀಯ ನೀತಿಯನ್ನು ಅತಿಕ್ರಮಿಸಬೇಕಾದ ಕೆಲವು ಅಪರೂಪದ ಪ್ರಕರಣಗಳು ಇರಬಹುದು.ವಿಶೇಷವಾಗಿ ಸಂಸ್ಥೆಯ ಪ್ರವೇಶವನ್ನು ಹೊಂದಿರುವಾಗ ಸ್ಥಳೀಯ ನೀತಿ ಜಾರಿಗೊಳಿಸುವವರೊಂದಿಗೆ ಹಂಚಿಕೊಳ್ಳಲಾಗದ ಮಾಹಿತಿ.
ಈ ನೀತಿಯು ಸಂಸ್ಥೆ ಜಾರಿಗೊಳಿಸಿದ ಜಾಗತಿಕ ನಿಷೇಧಗಳನ್ನು ಉಲೇಖಿಸುತ್ತದೆ. ಸಮುದಾಯಗಳು ನಿರ್ವಹಿಸುವ ಯಾವುದೇ ಸಮಾನವಾದ ನಿಷೇಧಗಳನ್ನು ಸ್ಪಷ್ಟವಾಗಿ ಕರೆಯಲಾಗುತ್ತದೆ. ಅಂತೆಯೇ, ಈ ನೀತಿಯ ಅಡಿಯಲ್ಲಿ "ಜಾಗತಿಕ ನಿಷೇಧ" ಅಥವಾ "ನಿಷೇಧ" ಎಂಬ ಪದಗಳು ಸಂಸ್ಥೆ ಜಾರಿಗೊಳಿಸಿದ ಜಾಗತಿಕ ನಿಷೇಧಗಳನ್ನು ಉಲ್ಲೇಖಿಸುತ್ತದೆ ಹಾಗೂ ವಿಕಿಮೀಡಿಯಾ ಸಮುದಾಯದಿಂದ ಇದೇ ರೀತಿಯ ನಿಷೇಧಗಳನ್ನು ಇರಿಸಬಹುದು.
ಈ ನೀತಿಯನ್ನು ಪಾರದರ್ಶಕತೆ ಮತ್ತು ತಿಳುವಳಿಕೆಗೆ ಸಹಾಯ ಮಾಡಲು ಪ್ರಕಟಿಸಲಾಗಿದೆ, ಆದರೆ ಇಲ್ಲಿ ದಾಖಲೆಯು ನೀತಿಯನ್ನು ಸ್ಥಾಪಿಸುವ ಬದಲು ದಾಖಲಿಸುತ್ತದೆ. ನೀತಿಗೆ ಯಾವುದೇ ನವೀಕರಣಗಳನ್ನು ಸಾಧ್ಯವಾದಷ್ಟು ಬೇಗ ದಾಖಲಿಸಲಾಗುತ್ತದೆ, ಆದರೆ ಇದು ಸಾರ್ವಜನಿಕ ದಾಖಲೆಯನ್ನು ಬದಲಾಯಿಸುವ ಮೊದಲೇ ಕಾರ್ಯರೂಪಕ್ಕೆ ಬರಬಹುದು. ಈ ದಾಖಲೆಯಲ್ಲಿನ ಬದಲಾವಣೆಗಳು, ಸಂಸ್ಥೆ ನಿಯೋಜಿತ ಸಿಬ್ಬಂದಿಗಳು ಮಾಡದ ಹೊರತು, ಅಧಿಕೃತ ನೀತಿ ಮತ್ತು ಆಚರಣೆಯನ್ನು ಪ್ರತಿಬಿಂಬಿಸದಿರಬಹುದು. ಬದಲಾವಣೆಗಳು ಅಥವಾ ಪ್ರಸ್ತುತ ಅಭ್ಯಾಸದ ಕುರಿತು ಪ್ರಶ್ನೆಗಳನ್ನು ಚರ್ಚೆ ಪುಟದಲ್ಲಿ ತಿಳಿಸಬಹುದು ಅಥವಾ ca@wikimedia.org ಗೆ ಇಮೇಲ್ ಮಾಡಬಹುದು.
ಜಾಗತಿಕ ನಿಷೇಧದ ಪರಿಣಾಮಗಳು
ಜಾಗತಿಕ ನಿಷೇಧವು ವಿಕಿಮೀಡಿಯಾ ಸಂಸ್ಥೆಯ ವೆಬ್‌ಸೈಟ್, ಪ್ಲಾಟ್‌ಫಾರ್ಮ್ ಮತ್ತು ಚಟುವಟಿಕೆಗಳಲ್ಲಿನ ಎಲ್ಲಾ ಸಂಪಾದನೆ ಮತ್ತು ಇತರರ ಪ್ರವೇಶ ಸವಲತ್ತುಗಳಿಂದ ವ್ಯಕ್ತಿಗಳನ್ನು ಅವರ ಸ್ವಂತ ಸಾಮರ್ಥ್ಯದಲ್ಲಿ ಅಥವಾ ಇತರರನ್ನು ಏಜೆಂಟ್ಗಳಾಗಿ ಪ್ರವೇಶಿಸುವುದನ್ನು ನಿಷೇಧಿಸುತ್ತದೆ. ಇದು www.wikimedia.org ನಲ್ಲಿ ಪಟ್ಟಿ ಮಾಡಲಾದ ಯಾವುದೇ ಸೈಟ್, ಫೌಂಡೇಶನ್ ಹೋಸ್ಟ್ ಮಾಡಿದ ಮೇಲಿಂಗ್ ಪಟ್ಟಿಗಳನ್ನು ಒಳಗೊಂಡಿರುತ್ತದೆ, ಆದರೆ ಸೀಮಿತವಾಗಿಲ್ಲ. ವಿಕಿಮೀಡಿಯಾ ಕ್ಲೌಡ್ ಸೇವೆಗಳು ಮತ್ತು ವಿಕಿಮೀಡಿಯಾ ತಾಂತ್ರಿಕ ಮೂಲಸೌಕರ್ಯಗಳಾದ ಫ್ಯಾಬ್ರಿಕೇಟರ್ ಹಾಗೂ ಯಾವುದೇ ವ್ಯಕ್ತಿಗತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಕ್ಕಾಗಿ ಈ ಸಂಸ್ಥೆಯು ಕೊಡುಗೆಯನ್ನು ನೀಡುತ್ತದೆ. ಅದರಂತೆ, ಪ್ರತಿಷ್ಠಾನದಿಂದ ಜಾಗತಿಕವಾಗಿ ನಿಷೇಧಿಸಲ್ಪಟ್ಟಿರುವ ವ್ಯಕ್ತಿಯು ವಿಕಿಮೀಡಿಯಾ ಪ್ರತಿಷ್ಠಾನದ ಸ್ಪಷ್ಟ ಅನುಮತಿಯಿಲ್ಲದೆ ಆ ತಾಣಗಳು, ವೇದಿಕೆಗಳು ಅಥವಾ ಪಟ್ಟಿಗಳಲ್ಲಿನ ಯಾವುದೇ ವಿಷಯವನ್ನು ಸಂಪಾದಿಸಲು, ಕೊಡುಗೆ ನೀಡಲು ಅಥವಾ ಮಾರ್ಪಡಿಸಲು ಸಾಧ್ಯವಿಲ್ಲ. ಹೆಚ್ಚುವರಿಯಾಗಿ, ಜಾಗತಿಕವಾಗಿ ನಿಷೇಧಿತ ವ್ಯಕ್ತಿಯು ಇತರರ ಮೂಲಕ ಸಂಸ್ಥೆಯ ಸೈಟ್‌ಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಚಟುವಟಿಕೆಗಳಲ್ಲಿ ಮೇಲೆ ತಿಳಿಸಲಾದ ಸನ್ನಿವೇಶಗಳಿಗೆ ಕಾರಣವಾಗುವ ಚಟುವಟಿಕೆಯನ್ನು ಸಂಘಟಿಸಲು ಸಾಧ್ಯವಿಲ್ಲ. ನಿಷೇಧಿತ ವ್ಯಕ್ತಿ ಅಥವಾ ಇತರರು ಅಂತಹ ಚಟುವಟಿಕೆಗಳ ಫಲಿತಾಂಶವು ಸಕಾರಾತ್ಮಕವಾಗಿರುತ್ತದೆ ಎಂದು ನಂಬುತ್ತಾರೋ ಇಲ್ಲವೋ, ಅಂತಹ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗುತ್ತದೆ . ಜಾಗತಿಕವಾಗಿ ನಿಷೇಧಿಸಲಾದ ಬಳಕೆದಾರರು ವಿಕಿಮೀಡಿಯಾ ಯೋಜನೆಗಳಿಗೆ ಮತ್ತಷ್ಟು ತೊಡಗಿಸಿಕೊಂಡರೆ, ನಿಷೇಧದ ನಂತರ, ನಿಷೇಧದ ವ್ಯಾಪ್ತಿ ಅಥವಾ ಸಿಂಧುತ್ವವನ್ನು ಕಡಿಮೆ ಮಾಡುವುದಿಲ್ಲ. ನಿಷೇಧಿತ ವ್ಯಕ್ತಿಯು ನೀಡಿದ ಯಾವುದೇ ಕೊಡುಗೆಗಳನ್ನು, ನೇರವಾಗಿ ಅಥವಾ ಪರೋಕ್ಷವಾಗಿ, ನಿಷೇಧದ ಅನುಷ್ಠಾನದ ಭಾಗವಾಗಿ ಹಿಂತಿರುಗಿಸಬಹುದು ಅಥವಾ ತೆಗೆದುಹಾಕಬಹುದು.
ಜಾಗತಿಕ ನಿಷೇಧವನ್ನು ಪರಿಗಣಿಸುವ ಮಾನದಂಡಗಳು
ಸಂಸ್ಥೆಯ ಜಾಗತಿಕ ನಿಷೇಧವು ಕೊನೆಯ ಉಪಾಯವಾಗಿದ್ದು ಸಾಮಾನ್ಯವಾಗಿ ದೂರು, ತನಿಖೆ, ವ್ಯಾಪಕ ಪರಿಶೀಲನೆ ಮತ್ತು ಹಲವಾರು ಸಂಸ್ಥೆಯ ಸಿಬ್ಬಂದಿ ಸದಸ್ಯರಿಂದ ಸ್ಪಷ್ಟ ಅನುಮೋದನೆಯ ಸ್ವೀಕೃತಿಯ ಮೇಲೆ ಕಾರ್ಯಗತಗೊಳಿಸಲಾಗುತ್ತದೆ.
ಕೆಳಗಿನ ಯಾವುದೇ ಸಂದರ್ಭಗಳು ಅನ್ವಯಿಸಿದಾಗ ಅವುಗಳನ್ನು ಸೂಕ್ತವಾದ ಕ್ರಮವೆಂದು ಪರಿಗಣಿಸಲಾಗುತ್ತದೆ:
- ಮೇಲಿನ ಸನ್ನಿವೇಶಗಳನ್ನು ಸ್ವಯಂ-ಪೊಲೀಸ್ ಮಾಡಲು ಅಥವಾ ಅವುಗಳನ್ನು ಪರಿಹರಿಸಲು ಅಥವಾ ತಗ್ಗಿಸಲು ಕ್ರಮ ಕೈಗೊಳ್ಳಲು ಸಮುದಾಯಗಳಿಂದ ಸಾಮರ್ಥ್ಯದ ಕೊರತೆಯಿದೆ
- ಪರಿಸ್ಥಿತಿಯನ್ನು ಪರಿಹರಿಸಲು ಸಮುದಾಯ-ನೇತೃತ್ವದ ಎಲ್ಲಾ ಪ್ರಯತ್ನಗಳನ್ನು ಪ್ರಯತ್ನಿಸಲಾಗಿದೆ ಮತ್ತು ವಿಫಲವಾಗಿದೆ ಎಂದು ತೋರುತ್ತದೆ
- ಸಂಸ್ಥೆಗೆ ನಾವು ಸಾರ್ವಜನಿಕವಾಗಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯ ಬಗ್ಗೆ ಜ್ಞಾನವಿದೆ
- ಅಂತಹ ನಿದರ್ಶನಗಳು ವೈಯಕ್ತಿಕವಾಗಿ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ ಸಂದರ್ಭಗಳನ್ನು ಒಳಗೊಂಡಿರಬಹುದು,
ವೈಯಕ್ತಿಕವಾಗಿ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ ಸಂದರ್ಭಗಳು, ನಡೆಯುತ್ತಿರುವ ಪೊಲೀಸ್ ತನಿಖೆಗೆ ಸಂಬಂಧಿಸಿವೆ ಅಥವಾ ನ್ಯಾಯಾಲಯದ ವಿಚಾರಣೆಗಳು ಭದ್ರತಾ ಅಪಾಯವನ್ನು ಉಂಟುಮಾಡಬಹುದು
ಮೇಲೆ ತಿಳಿಸಲಾದ ಯಾವುದೇ ಸನ್ನಿವೇಶಗಳ ಸಂಯೋಜನೆಯಲ್ಲಿ, ಸಂಸ್ಥೆಯ ಜಾಗತಿಕ ನಿಷೇಧಕ್ಕೆ ಕಾರಣವಾಗುವ ಚಟುವಟಿಕೆಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ, ಆದರೆ ಇವುಗಳಿಗೆ ಸೀಮಿತವಾಗಿಲ್ಲ.
ಬಹು ಯೋಜನೆಗಳಲ್ಲಿ ಬಳಕೆದಾರರಿಗೆ ಗಮನಾರ್ಹ ಅಥವಾ ಪುನರಾವರ್ತಿತ ಕಿರುಕುಳದಲ್ಲಿ ತೊಡಗಿಸಿಕೊಳ್ಳುವುದು.
- ಬಳಕೆದಾರರಿಗೆ (ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ) ಬೆದರಿಕೆ ಹಾಕಲು ವಿಕಿಮೀಡಿಯಾ ಸೈಟ್‌ಗಳ ಗಮನಾರ್ಹ ಅಥವಾ ಪುನರಾವರ್ತಿತ ಕಿರುಕುಳದಲ್ಲಿ ತೊಡಗಿಸಿಕೊಳ್ಳುವುದು
- ನಮ್ಮ ಬಳಕೆದಾರರು ಅಥವಾ ಉದ್ಯೋಗಿಗಳ ನಂಬಿಕೆ ಅಥವಾ ಸುರಕ್ಷತೆಯನ್ನು ಗಮನಾರ್ಹವಾಗಿ ರಾಜಿ ಮಾಡಿಕೊಳ್ಳುವುದು ಅಥವಾ ಬೆದರಿಕೆ ಹಾಕುವುದು.
* ವಿಕಿಮೀಡಿಯಾ ಸರ್ವರ್‌ಗಳಲ್ಲಿ ಕಾನೂನುಬಾಹಿರ ವಿಷಯವನ್ನು ಹೋಸ್ಟ್ ಮಾಡುವ ಮೂಲಕ ನಮ್ಮ ಬಳಕೆಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವುದು.
- ವಿಕಿಮೀಡಿಯಾ ಮೂಲಸೌಕರ್ಯದ ಭದ್ರತೆಗೆ ಬೆದರಿಕೆ ಅಥವಾ ರಾಜಿ ಮಾಡಿಕೊಳ್ಳುವುದು.
ಜಾಗತಿಕ ನಿಷೇಧದಿಂದ ಪ್ರಭಾವಿತವಾಗಿರುವ ಪಕ್ಷಗಳು
ನಿರ್ದಿಷ್ಟ ಬಳಕೆದಾರ ಹೆಸರಿನ ಬದಲಾಗಿ ವ್ಯಕ್ತಿಯ ವಿರುದ್ಧ ಪ್ರತಿಷ್ಠಾನದ ಜಾಗತಿಕ ನಿಷೇಧವನ್ನು ಇರಿಸಲಾಗಿದೆ. ಆದ್ದರಿಂದ ಇದು ಒಬ್ಬ ವ್ಯಕ್ತಿಯು ನಿಯಂತ್ರಿಸಬಹುದಾದ ಯಾವುದೇ ಪರ್ಯಾಯ ಖಾತೆಗೂ ಹಾಗೂನಿಷೇಧವನ್ನು ಜಾರಿಗೆ ತಂದ ನಂತರ ಅವರು ರಚಿಸುವ ಖಾತೆಗೂ ಅನ್ವಯಿಸುತ್ತದೆ. ಇದು ನಿಷೇಧಿತ ವ್ಯಕ್ತಿಯು ಬಳಸುತ್ತಿರುವ ಅಥವಾ ಭವಿಷ್ಯದಲ್ಲಿ ಬಳಸಬಹುದಾದ ಅನಾಮಧೇಯ/"ಐಪಿ" ಖಾತೆಗಳಿಗೂ ಅನ್ವಯಿಸಬಹುದು. ಮೇಲೆ ತಿಳಿಸಿದಂತೆ, ಇತರ ಪಕ್ಷಗಳು ತಮ್ಮ ಪರವಾಗಿ ಕೈಗೊಂಡ ಕ್ರಮವೂ ಸೇರಿದಂತೆ, ಅಂತಹ ವ್ಯಕ್ತಿಗಳು ಪ್ರಾರಂಭಿಸಿದ ಯಾವುದೇ ಕ್ರಮಕ್ಕೂ ಇದು ಅನ್ವಯಿಸುತ್ತದೆ.
ಜಾಗತಿಕ ನಿಷೇಧಗಳ ಸೂಚನೆ
ಸಂಸ್ಥೆಯ ಜಾಗತಿಕ ನಿಷೇಧವನ್ನು ಜಾರಿಗೆ ತಂದಾಗ ಬಾಧಿತ ವ್ಯಕ್ತಿಯ ಬಳಕೆದಾರರ ಖಾತೆಯಲ್ಲಿ ಅಥವಾ ಅವರು ಬಹು ಖಾತೆಗಳನ್ನು ಬಳಸಿದಲ್ಲಿ ಅವರು ಪ್ರಾಥಮಿಕ ಬಳಕೆದಾರರ ಖಾತೆಯಲ್ಲಿ ಜಾಗತಿಕ ನಿಷೇಧದ ಸಂಕ್ಷಿಪ್ತ ಸಾರ್ವಜನಿಕ ಟಿಪ್ಪಣಿ ಕಾಣಿಸಿಕೊಳ್ಳುತ್ತದೆ.ಅದೇ ಟಿಪ್ಪಣಿ ಅವರ ಖಾತೆಯ ಚರ್ಚೆ ಪುಟದಲ್ಲಿ ಕಾಣಿಸಿಕೊಳ್ಳುತ್ತದೆ. ನಿಷೇಧಿತ ವ್ಯಕ್ತಿಯ ಖಾತೆಯನ್ನು ಸಂಸ್ಥೆಯ ಜಾಗತಿಕವಾಗಿ ನಿಷೇಧಿತ ಬಳಕೆದಾರರ ಪಟ್ಟಿಯಿಂದ ಲಿಂಕ್ ಮಾಡಲಾಗುತ್ತದೆ.
ನಿಷೇಧವು ಜಾರಿಗೆ ಬರುವ ದಿನದಂದು, ಜಾಗತಿಕವಾಗಿ ನಿಷೇಧಿಸಲಾದ ಬಳಕೆದಾರರಿಗೆ ಅವರ ಸ್ಥಿತಿ ಮತ್ತು ಮೇಲ್ಮನವಿ ಆಯ್ಕೆಗಳ ಬಗ್ಗೆ ಖಾಸಗಿಯಾಗಿ ಸೂಚಿಸಲಾಗುತ್ತದೆ. ಸಾಧ್ಯವಾದಾಗ, ಅಂತಹ ಅಧಿಸೂಚನೆಯು ಬಲಿಪಶು ಅಥವಾ ಇತರ ಬಳಕೆದಾರರಿಗೆ ವಿಶ್ವಾಸಾರ್ಹ ಬೆದರಿಕೆಯನ್ನು ಹೆಚ್ಚಿಸದ ಹೊರತು ಅಥವಾ ಅಂತಹ ಅಧಿಸೂಚನೆಯು ನಡೆಯುತ್ತಿರುವ ತನಿಖೆಗೆ ಅಡ್ಡಿಯಾಗುತ್ತದೆ.ಜಾಗತಿಕ ನಿಷೇಧದ ಖಾಸಗಿ ಅಧಿಸೂಚನೆಯನ್ನು ನೊಂದಾಯಿಸಿದ ಬಳಕೆದಾರರಿಗೆ ಇ-ಮೇಲ್ ಅಥವಾ ವಿಕಿಪೀಡಿಯಾ ಸೈಟ್ಅಥವಾ ಪ್ಲಾಟ್ಫಾರ್ಮ್ ಮೂಲಕ ನೀಡಲಾಗುತ್ತದೆ.ಒಂದು ವೇಳೆ ಯಾವುದೇ ಇಮೇಲ್ ವಿಳಾಸ ಲಭ್ಯವಿಲ್ಲದಿದ್ದರೆ, ಯಾವುದೇ ಖಾಸಗಿ ಸೂಚನೆಯನ್ನು ನೀಡಲಾಗುವುದಿಲ್ಲ.
ವರದಿ ಮಾಡುವ ವ್ಯಕ್ತಿಗೆ (ಸೌಜನ್ಯದ ವಿಷಯವಾಗಿ) ಜಾಗತಿಕ ನಿಷೇಧದ ಸೂಚನೆಯನ್ನು ಸಹ ನೀಡಬಹುದು.
ಮೇಲ್ಮನವಿಗಳು
ಜಾಗತಿಕ ನಿಷೇಧಗಳನ್ನು ಒಳಗೊಂಡಂತೆ ಕೆಲವು ಕಛೇರಿ ಕ್ರಮಗಳನ್ನು ಮೇಲ್ಮನವಿ ಸಲ್ಲಿಸಬಹುದು.ನಿರ್ದಿಷ್ಟ ಬಳಕೆದಾರರ ನಡವಳಿಕೆಯ ತನಿಖೆಗಳ ಸುತ್ತ ಕೈಗೊಳ್ಳಲಾದ ಕಚೇರಿ ಕ್ರಮಗಳಿಗೆ ಸಂಬಂಧಿಸಿದಂತೆ, ಸಾರ್ವತ್ರಿಕ ನೀತಿ ಸಂಹಿತೆಯ ಸಂಭಾಷಣೆಗಳ ಮೂಲಕ ಶಾಶ್ವತ ಪ್ರಕ್ರಿಯೆಯನ್ನು ರಚಿಸುವವರೆಗೆ ಅರ್ಹ ಟ್ರಸ್ಟ್ ಮತ್ತು ಸುರಕ್ಷತೆ ಕಚೇರಿ ಕ್ರಮಗಳ ಮೇಲ್ಮನವಿಗಳನ್ನು ಪರಿಶೀಲಿಸಲು ಸ್ವಯಂಸೇವಕ ಟ್ರಸ್ಟ್ ಮತ್ತು ಸುರಕ್ಷತಾ ಪ್ರಕರಣದ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ.ನಿರ್ದಿಷ್ಟ ಬಳಕೆದಾರರ ನಡವಳಿಕೆಯ ತನಿಖೆಯ ಸುತ್ತ ಕೈಗೊಂಡ ಕಚೇರಿ ಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವತ್ರಿಕ ನೀತಿ ಸಂಹಿತೆಯ ಮೂಲಕ ಶಾಶ್ವತ ಪ್ರಕ್ರಿಯೆಯನ್ನು ರಚಿಸಲಾಗುತ್ತದೆ.ಹಾಗೂ ಅರ್ಹ ಟ್ರಸ್ಟ್ ಮತ್ತು ಸುರಕ್ಷತೆ ಕಚೇರಿ ಕ್ರಮಗಳ ಮೇಲ್ಮನವಿಗಳನ್ನು ಪರಿಶೀಲಿಸಲು ಸ್ವಯಂಸೇವಕ ಟ್ರಸ್ಟ್ ಮತ್ತು ಸುರಕ್ಷತಾ ಪ್ರಕರಣದ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ವ್ಯಕ್ತಿಗಳು ಮಾತ್ರ ಆರಂಭಿಕ ಪ್ರಕರಣವನ್ನು ವಿನಂತಿಸಿದ ವ್ಯಕ್ತಿಯಾಗಿ ಅಥವಾ ತನಿಖೆಯಲ್ಲಿರುವ ವ್ಯಕ್ತಿಯಾಗಿ ಪರಿಶೀಲನೆಗೆ ವಿನಂತಿಸಬಹುದು. ನಮ್ಮ ನಿರ್ಧಾರದ ನಂತರ ವಿಮರ್ಶೆಗಳನ್ನು ವಿನಂತಿಸಬಹುದು (ಅಂದರೆ ಕಚೇರಿಯ ಕ್ರಮವನ್ನು ತೆಗೆದುಕೊಳ್ಳಬೇಕೆ ಅಥವಾ ಬೇಡವೇ). ಮೇಲ್ಮನವಿಗಳನ್ನು ಸಲ್ಲಿಸಲು ಸೂಚನೆಗಳನ್ನು ಟ್ರಸ್ಟ್ ಮತ್ತು ಸುರಕ್ಷತಾ ಪ್ರಕರಣ ಪರಿಶೀಲನಾ ಸಮಿತಿ ಪುಟದಲ್ಲಿ ಕಾಣಬಹುದು.
ಜಾಗತಿಕ ನಿಷೇಧಕ್ಕೆ ಆಗ್ರಹ
ಜಾಗತಿಕ ನಿಷೇಧದ ಪರಿಗಣನೆಗೆ ವಿನಂತಿಗಳನ್ನು ಸಂಸ್ಥೆಯ ಟ್ರಸ್ಟ್ ಮತ್ತು ಸೇಫ್ಟಿ (T&S) ಗೆ ಸಲ್ಲಿಸಬಹುದು.ವಿನಂತಿಯನ್ನು ತ್ವರಿತವಾಗಿ ಪರಿಗಣಿಸಲು, ಅದು ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:
- ವಿನಂತಿಯ ಕಾರಣಗಳ ಸಂಕ್ಷಿಪ್ತ ಸಾರಾಂಶ
- ಸಾಕ್ಷ್ಯ (URL ) ಸ್ಥಳೀಯ ಸಮುದಾಯ ಆಡಳಿತ ರಚನೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಪ್ರಯತ್ನಗಳು ನಡೆದಿವೆ, ಅಲ್ಲಿ ಅಂತಹ ಪ್ರಯತ್ನಗಳು ಸೂಕ್ತವಾಗಿವೆ
- ಯಾವುದೇ ನಿರ್ಣಾಯಕ ಮಾಹಿತಿ ಮತ್ತು ಬೆಂಬಲದ ಪುರಾವೆಗಳು ಅಥವಾ ಸೂಕ್ತವಾದ ದಾಖಲಾತಿ ಸೇರಿದಂತೆ ವಿನಂತಿ. ಇದು ವರದಿಯಾಗುತ್ತಿರುವ ನಿಂದನೀಯ ನಡವಳಿಕೆಯ URL ಗಳು, ವರದಿಯಾದ ವ್ಯಕ್ತಿಗೆ ಸಂಬಂಧಿಸಿದ ಸಮುದಾಯ-ನೇತೃತ್ವದ ತನಿಖೆಗಳು, ಆಫ್-ವಿಕಿ ಮಾಹಿತಿಯ ಸ್ಕ್ರೀನ್ಶಾಟ್ಗಳು (ವಿನಂತಿಯನ್ನು ನೇರವಾಗಿ ಅನ್ವಯಿಸಿದಾಗ) ಇತ್ಯಾದಿಗಳನ್ನು ಒಳಗೊಂಡಿರಬಹುದು
- ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ವಿನಂತಿಯನ್ನು ಪರಿಗಣಿಸಿದರೆ, ಯಾವುದೇ ಪ್ರಮುಖ ಪಠ್ಯಗಳ ಇಂಗ್ಲಿಷ್ ಅನುವಾದಗಳನ್ನು ಸಹ ಒದಗಿಸುವುದು ಸಹಾಯಕವಾಗಿರುತ್ತದೆ. ಏಕೆಂದರೆ ಇದು ವಿಮರ್ಶೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ವಿಕಿಮೀಡಿಯಾ ಪ್ರಾಜೆಕ್ಟ್ ಚರ್ಚೆ ಪುಟಗಳು, ವೈಯಕ್ತಿಕ ಸಂದೇಶ ರವಾನೆ ವೇದಿಕೆಗಳು ಅಥವಾ ವೈಯಕ್ತಿಕವಾಗಿ ಸೇರಿದಂತೆ ಯಾವುದೇ ಇತರ ಸ್ಥಳದ ಮೂಲಕ ಮಾಡಿದ ಜಾಗತಿಕ ನಿಷೇಧಗಳ ವಿನಂತಿಗಳನ್ನು ಪರಿಗಣಿಸಲಾಗುವುದಿಲ್ಲ.
ನೀತಿಯ ಪ್ರಕಾರ ಜಾಗತಿಕ ನಿಷೇಧವನ್ನು ಸೂಕ್ತವೆಂದು ಪರಿಗಣಿಸಿದರೆ, ಕಚೇರಿಯ ಕ್ರಮಗಳ ನೀತಿಯಿಂದ ಸೂಚಿಸಿದಂತೆ ಟ್ರಸ್ಟ್ ಮತ್ತು ಸುರಕ್ಷತೆ ತಂಡದ ಯಾವುದೇ ಸದಸ್ಯರಿಂದ ಇದನ್ನು ಕಾರ್ಯಗತಗೊಳಿಸಬಹುದು.ಜಾಗತಿಕ ನಿಷೇಧದ ಎಲ್ಲಾ ವಿನಂತಿಗಳು ಅಂತಹ ಅನುಷ್ಠಾನಕ್ಕೆ ಕಾರಣವಾಗುವುದಿಲ್ಲ ಎಂದು ಗಮನಿಸಬೇಕು. ಕೆಲವು ಸಂದರ್ಭಗಳಲ್ಲಿ ಸಂಸ್ಥೆಯ ಬದಲಿಗೆ ಪರ್ಯಾಯ ಕಚೇರಿ ಕ್ರಿಯೆಗಳೊಂದಿಗೆ ಮುಂದುವರಿಯಬಹುದು.ಆದರೆ ಮೌಲ್ಯಮಾಪನ ಪ್ರಕ್ರಿಯೆಯ ಫಲಿತಾಂಶವನ್ನು ಅವಲಂಬಿಸಿ ಯಾವುದೇ ಕ್ರಮಗಳು ಇರುವುದಿಲ್ಲ.ಕ್ರಮದ ಕೊರತೆ (ಅಥವಾ ಸಾರ್ವಜನಿಕ ಕ್ರಿಯೆಯ ಕೊರತೆ) ವರದಿಯನ್ನು ಅಮಾನ್ಯ ಅಥವಾ ನ್ಯಾಯಸಮ್ಮತವಲ್ಲ ಎಂದು ಗ್ರಹಿಸಲಾಗದು ಎಂದು ಅರ್ಥವಲ್ಲ.ಬಹುಪಾಲು ಆನ್-ವಿಕಿ ಅಥವಾ ಬಳಕೆದಾರರ ನಡವಳಿಕೆಯ ಸಮಸ್ಯೆಗಳನ್ನು ಸಮುದಾಯವು ಸೂಕ್ತವಾಗಿ ನಿಭಾಯಿಸುತ್ತದೆ. ಮತ್ತು ವಿಕಿಮೀಡಿಯಾ ಸಂಸ್ಥೆ ಸಾಧ್ಯವಾದಲ್ಲೆಲ್ಲಾ ಸಮುದಾಯಕ್ಕೆ ಸಮಸ್ಯೆಗಳನ್ನು ಮುಂದೂಡುವಲ್ಲಿ ವಿಫಲಗೊಳ್ಳುತ್ತದೆ.
ಜಾಗತಿಕ ನಿಷೇಧಗಳ ಸಮಯ ರೇಖೆ
ಜಾಗತಿಕ ನಿಷೇಧವನ್ನು ಪರಿಗಣಿಸುವ ವಿನಂತಿಗಳನ್ನು ಸಾಮಾನ್ಯವಾಗಿ 4 ವಾರಗಳ ಕಾಲಾವಧಿಯಲ್ಲಿ ನಿರ್ವಹಿಸಲಾಗುತ್ತದೆ. ಪರಿಶೀಲಿಸಬೇಕಾದ ವಿಷಯವನ್ನು ಅವಲಂಬಿಸಿ ಇದನ್ನು ವಿಸ್ತರಿಸಬಹುದು. ಉದಾಹರಣೆಗೆ, ಇಂಗ್ಲಿಷ್ ಮಾತನಾಡದ ಸಮುದಾಯಗಳ ಬಳಕೆದಾರರ ವಿರುದ್ಧ ಜಾಗತಿಕ ನಿಷೇಧದ ವಿನಂತಿಗಳು ವಿಮರ್ಶೆಯನ್ನು ವಿಸ್ತರಿಸಬಹುದು, ಏಕೆಂದರೆ ಅನುವಾದವು ಸಮಯ ತೆಗೆದುಕೊಳ್ಳಬಹುದು.
ಸಾಮಾನ್ಯ ಮಾಹಿತಿ
ಜಾಗತಿಕ ನಿಷೇಧವು, ಸಂಸ್ಥೆಯು ಜಾರಿಗೊಳಿಸಬಹುದಾದ ಹಲವಾರು ಕಚೇರಿ ಕ್ರಿಯೆಗಳಲ್ಲಿ ಒಂದಾಗಿದೆ.ಸಾಮಾನ್ಯವಾಗಿ ಕಚೇರಿ ಕ್ರಿಯೆಗಳ ಜೊತೆಗೆ ಸಂಸ್ಥೆಯ ಜಾಗತಿಕ ನಿಷೇಧಗಳ ಬಗ್ಗೆ ಕೆಲವು ಅಂಶಗಳನ್ನು ಸ್ಪಷ್ಟಪಡಿಸಲು ಸಹಾಯ ಮಾಡುವುದು ಮುಖ್ಯವಾಗಿದೆ.
ಯೋಜನೆಗಳಿಗೆ ಸಕಾರಾತ್ಮಕ ಕೊಡುಗೆಗಳು ಮತ್ತು ಜಾಗತಿಕ ನಿಷೇಧವು ಪರಸ್ಪರ ಪ್ರತ್ಯೇಕವಾಗಿಲ್ಲ.
ವಿಕಿಮೀಡಿಯಾ ಯೋಜನೆಗಳಿಗೆ ವ್ಯಾಪಕವಾದ ಸಕಾರಾತ್ಮಕ ಕೊಡುಗೆಯು ಜಾಗತಿಕ ನಿಷೇಧದ ವಿರುದ್ಧ ವಿನಾಯಿತಿಯನ್ನು ನೀಡುವುದಿಲ್ಲ ಅಥವಾ ಸ್ಥಳೀಯ ವಿಕಿಮೀಡಿಯಾ ಸಮುದಾಯದೊಳಗೆ ಗೌರವಾನ್ವಿತ ಸ್ಥಾನವನ್ನು ಹೊಂದಿರುವುದಿಲ್ಲ. ಅಂಗಸಂಸ್ಥೆಯ ಗುಂಪಿನ ಸದಸ್ಯತ್ವವನ್ನು ಹೊಂದಿರುವುದಿಲ್ಲ ಹಾಗೂ ಪ್ರತಿಷ್ಠಾನದೊಂದಿಗಿನ ಸ್ಥಾನವನ್ನು ಹೊಂದಿರುವುದಿಲ್ಲ. ಜಾಗತಿಕ ನಿಷೇಧದ ಪರಿಗಣನೆಯು ವರದಿಯಾದ ಚಟುವಟಿಕೆಯ ಅರ್ಹತೆಗಳನ್ನು ಆಧರಿಸಿದೆ, ಅದು ಮೇಲೆ ತಿಳಿಸಿದ ಸನ್ನಿವೇಶಗಳಲ್ಲಿ ಒಂದಕ್ಕೆ ಒಳಪಟ್ಟರೆ, ವಿಕಿಮೀಡಿಯಾ ಚಳವಳಿಗೆ ವ್ಯಕ್ತಿಯೊಬ್ಬ ನೀಡಿದ ಸಕಾರಾತ್ಮಕ ಪೂರ್ವ ಕೊಡುಗೆಯಿಂದ ಸರಿದೂಗಿಸಲಾಗುವುದಿಲ್ಲ.
ಜಾಗತಿಕ ನಿಷೇಧದ ಉಲ್ಲಂಘನೆ ಸ್ವೀಕಾರಾರ್ಹವಲ್ಲ
ಪ್ರತಿಷ್ಠಾನದ ಜಾಗತಿಕ ನಿಷೇಧದ ಉಲ್ಲಂಘನೆಗಳು ನಿಷೇಧಿತ ವ್ಯಕ್ತಿಯ ವಿರುದ್ಧ ತಕ್ಷಣದ ಕ್ರಮಗಳಿಗೆ ಕಾರಣವಾಗಬಹುದು. ಅವು ಜಾಗತಿಕ ಲಾಕ್ಗಳು, ಐಪಿ ವಿಳಾಸ ಬ್ಲಾಕ್ಗಳು, ಐಪಿ ಶ್ರೇಣಿಯ ಬ್ಲಾಕ್ಗಳು ಅಥವಾ ವಿಷಯ ತೆಗೆದುಹಾಕುವಿಕೆಯನ್ನು ಒಳಗೊಂಡಿರಬಹುದು.
ಜಾಗತಿಕವಾಗಿ ನಿಷೇಧಿತ ಬಳಕೆದಾರರಿಗೆ ತಮ್ಮ ನಿಷೇಧದಿಂದ ತಪ್ಪಿಸಲು ಸಹಾಯ ಮಾಡುವ ಉದ್ದೇಶವು ನಿರ್ಬಂಧಗಳಿಗೆ ಕಾರಣವಾಗಬಹುದು
ಜಾಗತಿಕವಾಗಿ ನಿಷೇಧಿಸಲಾದ ವ್ಯಕ್ತಿಯ ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿ ಸುಗಮಗೊಳಿಸುವುದು. ಅಂತಹ ವ್ಯಕ್ತಿಗೆ ಪ್ರತಿನಿಧಿಯಾಗಿ ವರ್ತಿಸುವುದು ಅಥವಾ ಸಂಬಂಧಿತ ನೀತಿಗಳಿಗೆ ಅನುಗುಣವಾಗಿ ಜಾಗತಿಕ ನಿಷೇಧವನ್ನು ಜಾರಿಗೊಳಿಸುವ ಸಂಸ್ಥೆ ಸಿಬ್ಬಂದಿ ಅಥವಾ ಸ್ವಯಂಸೇವಕ ನಿರ್ವಾಹಕರು, ಅಧಿಕಾರಿಗಳು ಅಥವಾ ಕಾರ್ಯಕರ್ತರಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುವ ಪ್ರಕ್ರಿಯೆ ನಿರ್ಬಂಧಗಳಿಗೆ ಕಾರಣವಾಗಬಹುದು. ಇದರಲ್ಲಿ ಸುಧಾರಿತ ಬಳಕೆದಾರರ ಹಕ್ಕುಗಳ ನಷ್ಟ ಅಥವಾ ವಿಕಿಮೀಡಿಯಾ ಸೈಟ್ಗಳಿಗೆ ಕೊಡುಗೆ ನೀಡುವ ಪ್ರವೇಶವನ್ನು ಅಮಾನತುಗೊಳಿಸುವುದು ಸೇರಿವೆ. ನಿಷೇಧದಿಂದ ತಪ್ಪಿಸಿಕೊಳ್ಳಲು ಜಾಗತಿಕವಾಗಿ ನಿಷೇಧಿತ ಬಳಕೆದಾರರನ್ನು ಸಕ್ರಿಯಗೊಳಿಸುವ ನಿದರ್ಶನಗಳನ್ನು ca@wikimedia.org ನಲ್ಲಿ T&S ಗೆ ತಿಳಿಸುವ ಮೂಲಕ ಸಂಸ್ಥೆಯ ಗಮನಕ್ಕೆ ತರಬಹುದು
ಜಾಗತಿಕ ನಿಷೇಧಗಳ ವಿವರಗಳ ಗೌಪ್ಯತೆ
ಒಳಗೊಂಡಿರುವ ಎಲ್ಲಾ ಪಕ್ಷಗಳ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ, ವಿಕಿಮೀಡಿಯಾ ಸಂಸ್ಥೆ ಸಾಮಾನ್ಯವಾಗಿ ಯಾವುದೇ ನಿರ್ದಿಷ್ಟ ನಿಷೇಧದ ಕ್ರಿಯೆಯ ಕಾರಣದ ಬಗ್ಗೆ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಪ್ರತಿಕ್ರಿಯೆ ಸುವುದಿಲ್ಲ.ತಕ್ಷಣವೇ ಬಾಗಿತ ವ್ಯಕ್ತಿಯು ತಮ್ಮ ಜಾಗತಿಕ ನಿಷೇಧಕ್ಕೆ ಸಂಬಂಧಿಸಿದಂತೆ ಅವರು ಸ್ವೀಕರಿಸಿದ ಯಾವುದೇ ನೋಟಿಸ್ ಗಳಿಗೆ ಸ್ಪಷ್ಟೀಕರಣ ಬೇಕಾದರೆ ca@wikimedia.org ಮೂಲಕ ಟಿ ಅಂಡ್ ಎಸ್ ಅನ್ನು ಸಂಪರ್ಕಿಸಬಹುದು ಮತ್ತು ಹೆಚ್ಚಿನ ಮಾಹಿತಿಯನ್ನು ಸೌಜನ್ಯದಿಂದ ಒದಗಿಸಬಹುದು.ಆದಾಗ್ಯೂ, ವರದಿ ಮಾಡುವ ಪಕ್ಷಗಳನ್ನು ಗುರುತಿಸುವಂತಹ ಯಾವುದೇ ಮಾಹಿತಿಯನ್ನು ನಾವು ಹಂಚಿಕೊಳ್ಳುವುದಿಲ್ಲ. ಅವರ ಅನುಭವಗಳು ಮತ್ತು/ಅಥವಾ ಕಾಳಜಿಗಳನ್ನು ಖಾಸಗಿಯಾಗಿ ವರದಿ ಮಾಡುವ ಹಕ್ಕನ್ನು ರಾಜಿ ಮಾಡಿಕೊಳ್ಳಬಹುದು. ಅಥವಾ ವರದಿ ಮಾಡುವ ಪಕ್ಷವನ್ನು ಅಪಾಯದಲ್ಲಿ ಇರಿಸಬಹುದು. ನಿಷೇಧದ ಅರ್ಹತೆಯ ಬಗ್ಗೆ ನಾವು ಮಾತುಕತೆ ನಡೆಸುವುದಿಲ್ಲ.
ಜಾಗತಿಕ ನಿಷೇಧಗಳು ಸ್ವಯಂಚಾಲಿತವಾಗಿಲ್ಲ.
ಸಂಸ್ಥೆಯ ಜಾಗತಿಕ ನಿಷೇಧಗಳು ಸ್ವಯಂ ಚಾಲಿತ ವಾಗಿರುವುದಿಲ್ಲ. ಇದು ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಬಳಸಲಾಗದು.ಜಾಗತಿಕ ನಿಷೇಧದ ಶಿಫಾರಸನ್ನು ಸಂಸ್ಥೆಯ ಸಿಬ್ಬಂದಿಗಳ ವಿಮರ್ಶೆಯ ಹಲವಾರು ಪದರಗಳ ಮೂಲಕ ಹಾದುಹೋಗುತ್ತದೆ.ಇದರಲ್ಲಿ ಟ್ರಸ್ಟ್ ಮತ್ತು ಸುರಕ್ಷತೆ ವ್ಯವಸ್ಥಾಪಕರು, ಟ್ರಸ್ಟ್ ಮತ್ತು ಸುರಕ್ಷತೆ ನಿರ್ದೇಶಕರು, ಸಮುದಾಯ ಎಂಗೇಜ್‌ಮೆಂಟ್ ಮುಖ್ಯ ನಿರ್ದೇಶಕರು, ಜನರಲ್ ಕೌನ್ಸೆಲ್ (ಅಥವಾ ಸೂಕ್ತ ಪ್ರತಿನಿಧಿ) ಮತ್ತು ಅನೇಕ ಸಂದರ್ಭಗಳಲ್ಲಿ , ಕಾರ್ಯನಿರ್ವಾಹಕ ನಿರ್ದೇಶಕ ಹಲವಾರು ಹಂತದ ಪರಿಶೀಲನೆ ಮೂಲಕ ಹೋಗುತ್ತದೆ.
ಜಾಗತಿಕ ನಿಷೇಧವನ್ನು ಜಾರಿಗೆ ತರದಿರಲು ಅನೇಕ ಕಾರಣಗಳಿರಬಹುದು.ಕೆಲವು ಸಂದರ್ಭಗಳಲ್ಲಿ, ಜಾಗತಿಕ ನಿಷೇಧವು ವರದಿ ಮಾಡುವವರ ಗೌಪ್ಯತೆ ಮತ್ತು ಸುರಕ್ಷತೆಗೆ ಧಕ್ಕೆ ತರಬಹುದು. ನಾವು ಅವರ ಬಗ್ಗೆ ಮಾಹಿತಿಯನ್ನು ವರದಿ ಮಾಡಿದ ವ್ಯಕ್ತಿಯೊಂದಿಗೆ ಹಂಚಿಕೊಳ್ಳದಿದ್ದರೂ ಸಹ ತಕ್ಷಣವೇ ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು.ಇತರ ಸಂದರ್ಭಗಳಲ್ಲಿ, ಜಾಗತಿಕ ನಿಷೇಧವನ್ನು ಜಾರಿಗೊಳಿಸುವುದರಿಂದ ನಡೆಯುತ್ತಿರುವ ಪೊಲೀಸ್ ಕೆಲಸಕ್ಕೆ ಅಡ್ಡಿಯಾಗಬಹುದು.ವರದಿಯಾದ ನಡವಳಿಕೆಯು ಸಮುದಾಯ ಅಥವಾ ಸಂಸ್ಥೆಯ ನಿರ್ಬಂಧಗಳ ಮಟ್ಟಕ್ಕೆ ಏರುವ ಸಾದ್ಯತೆಯೂ ಇದೆ. ಆದರೆ ಸಂಸ್ಥೆಗೆ ಜಾಗತಿಕ ನಿಷೇಧವನ್ನು ಸಮರ್ಪಿಸುವ ಅಗತ್ಯವಿಲ್ಲ.
ಬಳಕೆದಾರರ ಅಲ್ಲದವರು ಸಹ ಜಾಗತಿಕ ನಿಷೇಧಕ್ಕೆ ಒಳಗಾಗಬಹುದು.
ಕೆಲವು ಹಂತದಲ್ಲಿ ವಿಕಿಮೀಡಿಯಾ ಯೋಜನೆಗಳಿಗೆ ಸಕ್ರಿಯ ಕೊಡುಗೆ ನೀಡಿದ ವ್ಯಕ್ತಿಗಳ ವಿರುದ್ಧ ಸಾಮಾನ್ಯವಾಗಿ ಜಾಗತಿಕ ನಿಷೇಧಗಳನ್ನು ಜಾರಿಗೊಳಿಸಲಾಗುತ್ತದೆ.ಆದಾಗ್ಯೂ, ಯೋಜನೆಗಳಿಗೆ ಎಂದಿಗೂ ಕೊಡುಗೆ ನೀಡಿದ ವ್ಯಕ್ತಿಗಳು ವಿಕಿಪೀಡಿಯಾ ಸಂಸ್ಥೆಯಿಂದ ಬೆಂಬಲಿತ, ಪ್ರಾಯೋಜಿತ ಅಥವಾ ಧನಸಹಾಯ ಪಡೆದ ಯಾವುದೇ ಜಾಲತಾಣಗಳು ಚಟುವಟಿಕೆಗಳನ್ನು ಪ್ರವೇಶಿಸುವುದನ್ನು ಅಥವಾ ಭಾಗವಹಿಸುವಿಕೆಯನ್ನು ನಿಷೇಧಿಸುವ ಸಾಧ್ಯತೆ ಇದೆ.ಏಕೆಂದರೆ ಜಾಗತಿಕ ನಿಷೇಧಗಳು ಯೋಜನೆಗಳೊಂದಿಗೆ ಕೆಲವು ರೀತಿಯ ಸಂಬಂಧವನ್ನು ಹೊಂದಿರುವ ಜನರಿಗೆ ಸೀಮಿತವಾಗಿಲ್ಲ. ಬದಲಿಗೆ ಒಬ್ಬ ವ್ಯಕ್ತಿಯ ಚಟುವಟಿಕೆಯು ಯಾವುದೇ ವಿಕಿಮೀಡಿಯಾ ಯೋಜನೆಯ ಸಂಪಾದನೆ ಮತ್ತು ಓದುವ ಸಮುದಾಯಗಳ ನಂಬಿಕೆ ಮತ್ತು ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಅಪಾಯ ಉಂಟುಮಾಡಿದಾಗ ಮತ್ತು ಅವರು ಕೊಡುಗೆಗಳು ಮತ್ತು ಸಂವಾದವನ್ನು ಅಡ್ಡಿಪಡಿಸಿದಾಗ ಅವುಗಳನ್ನು ಕಾರ್ಯಗತಗೊಳಿಸಲಾಗುತ್ತದೆ.
ಈ ನೀತಿಯ ಬಗ್ಗೆ ಪ್ರಶ್ನೆಗಳು
ವಿಕಿಮೀಡಿಯಾ ಸಂಸ್ಥೆಯ ಜಾಗತಿಕ ನಿಷೇಧಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಈ ನೀತಿಯ ಚರ್ಚಾ ಪುಟದಲ್ಲಿ ಪ್ರಶ್ನೆಗಳನ್ನು ಬಿಡಬಹುದು ಅಥವಾ ca@wikimedia.org ನಲ್ಲಿ ಟ್ರಸ್ಟ್ ಮತ್ತು ಸುರಕ್ಷತೆ ತಂಡಕ್ಕೆ ಇಮೇಲ್ ಮೂಲಕ ಕಳುಹಿಸಬಹುದು.ಸಂಸ್ಥೆಯು ಜಾರಿಗೊಳಿಸಿದ ನಿರ್ದಿಷ್ಟ ಜಾಗತಿಕ ನಿಷೇಧಗಳ ಬಗೆಗಿನ ಪ್ರಶ್ನೆಗಳನ್ನು ಒಳಗೊಂಡಿರುವ ಎಲ್ಲರ ಗೌಪ್ಯತೆಯನ್ನು ಪರಿಹರಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಬೇಕು. ನಿಷೇಧಿತ ಸಮುದಾಯದ ಬಳಕೆದಾರರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದು.
ವಿಕಿಮೀಡಿಯಾ ಸಂಸ್ಥೆಯಿಂದ ಜಾಗತಿಕ ನಿಷೇಧಗಳ ಪಟ್ಟಿ
For the full log (including, for example, alternate accounts also locked under this policy), visit the WMFOffice log.
- Beta M, since 15 March 2012
- Demiurge1000, since 3 December 2014
- Dcoetzee, since 3 December 2014
- Amorrow, since 17 January 2015
- Leucosticte, since 17 January 2015
- Poetlister / Quillercouch, since 17 January 2015
- Russavia, since 17 January 2015
- Meco, since 23 March 2015
- Irada / İrada, since 11 June 2015
- Francis Kaswahili, since 23 July 2015
- Scalhotrod, since 2 November 2015
- Liliana-60, since 22 April 2016
- John F. Lewis, since 22 April 2016
- WayneRay, since 22 April 2016
- Ktr101, since 22 April 2016
- Styron111, since 17 June 2016
- Jake Christie of Southern California, since 8 October 2016
- Reguyla / Kumioko, since 13 April 2017
- MyWikiBiz / Thekohser, since 19 April 2017
- Graaf Statler, since 19 April 2017
- Messina, since 29 August 2017
- Krisdegioia, since 11 September 2017
- 守望者爱孟, since 1 December 2017
- Aydinsalis, since 13 December 2017
- Classiccardinal, since 9 January 2018
- INeverCry, since 30 January 2018
- Abd, since 24 February 2018
- Elbasyouny, since 20 June 2018
- Galaxyharrylion, since 8 August 2018
- BrillLyle, since 8 August 2018
- VivaVoltaire, since 10 September 2018
- ISECHIKA (いせちか), since 20 September 2018
- George Reeves Person (Projects), since 18 October 2018
- MelVic, since 20 March 2019
- WhenDatHotlineBling, since 20 March 2019
- *SM*, since 25 March 2019
- Wikinger, since 23 September 2019
- Laportehistorian, since 30 September 2019
- Pitufo.Budista, since 7 October 2019
- EMans, since 7 October 2019
- Comunicacionsocial, since 7 October 2019
- Cruks / Tokota, since 21 October 2019
- Carlos Eduardo1989, since 21 October 2019
- Mukdeng, since 28 October 2019
- Kompowiec2, since 12 November 2019
- Hasive, since 19 November 2019
- Codex Sinaiticus / Til Eulenspiegel, since 20 November 2019
- JarlaxleArtemis / Grawp, since 25 November 2019
- Jaredgk2008, since 2 December 2019
- Timothy Usher / Proabivouac, since 8 January 2020
- Cervello99, since 21 January 2020
- জঙ্গলবাসী, since 24 February 2020
- Joaquinito01, since 2 March 2020
- Alexcocopro, since 30 March 2020
- FFA P-16, since 13 April 2020
- مينا جمال صبحي, since 14 April 2020
- Maitreidmry / Jim167, since 16 June 2020
- Icewhiz, since 22 June 2020
- Cimbail / Robert Dabringhaus, since 29 June 2020
- Bodiadub / Crazyalien, since 20 July 2020
- Zawl / Flooded with them hundreds, since 27 July 2020
- Peadar / Borgatya, since 27 July 2020
- Meganesia / Ashurpedia / Assyriandude / Cirflow, since 4 August 2020
- عبد الله, since 29 September 2020
- Moj92, since 5 October 2020
- Willwill0415, since 2 November 2020
- James Salsman, since 17 November 2020
- SpokojneFale, since 17 November 2020
- ChemWarfare, since 7 December 2020
- Lascava / MaoMio, since 4 February 2021
- Equinoxepart5, since 8 February 2021
- Gigatomix, since 23 February 2021
- VideoGamePhenom, since 8 March 2021
- Arshifakhan61, since 23 March 2021
- Davidwr, since 31 March 2021
- Uri Even-Chen, since 3 May 2021
- Eissink, since 24 May 2021
- Futurist110, since 1 June 2021
- Lustucri / Melcch, since 14 June 2021
- Milivojevsasa / Sasamilivojev / Ana-africana / Diana-agnel / Jana.Mexicana / Sumaya-DXB / Maha-uae, since 12 July 2021
- A Den Jentyl Ettien Avel Dysklyver / Arthur Kerensa, since 20 July 2021
- Rgalo10, since 26 July 2021
- Keegscee, since 26 July 2021
- Mr. J.M. Vázquez, since 26 July 2021
- AttackTheMoonNow, since 24 August 2021
- 冏, since 6 September 2021
- Techyan, since 13 September 2021
- 游魂, since 13 September 2021
- 尤里的1994, since 13 September 2021
- ArthurLau1997, since 13 September 2021
- Walter Grassroot, since 13 September 2021
- 城市酸儒文人挖坑, since 13 September 2021
- 蟲蟲飛, since 13 September 2021
- A.Vajrapani, since 5 October 2021
- Mr. Roomba/Amerikkkka, since 5 October 2021
- Krassotkin, since 12 October 2021
- Леонид Макаров, since 6 December 2021
- Rodhullandemu, since 13 December 2021
- Gimli2001, since 4 January 2022
- Kiko4564, since 5 January 2022
- Tamara787 / Angela Criss, since 5 January 2022
- Ikip / Okip, since 1 February 2022
- Norbert IP, since 7 February 2022
- 1Goldberg2, since 8 February 2022
- Yael Weiler / Yael Israel / יעל י , since 9 February 2022
- Miss Mart miss, since 9 February 2022
- Cheep, since 1 June 2022
- Shōkakū24, since 1 June 2022
- Maurice Roux, since 1 June 2022
- Salomegrd, since 1 June 2022
- Bookowr, since 22 June 2022
- Atac2, since 2 December 2022
- جار الله, since 6 December 2022
- Glory20, since 6 December 2022
- M.Nadian, since 6 December 2022
- مصعب العبود, since 6 December 2022
- فاطمه جان, since 6 December 2022
- Aye1399, since 6 December 2022
- أسامة, since 6 December 2022
- وسام, since 6 December 2022
- صالح, since 6 December 2022
- بندر, since 6 December 2022
- سامي الرحيلي, since 6 December 2022
- FShbib, since 6 December 2022
- حاتم العتيبي, since 6 December 2022
- 4nn1l2, since 6 December 2022
- Shiasun, since 6 December 2022
- Shobhe, since 6 December 2022
- Waggie, since 14 December 2022
- NMasiha, since 18 January 2023
- Kolega2357, since 30 January 2023
- Avoided, since 2 February 2023
- Suzuki063, since 17 February 2023
- ByteOr, since 23 February 2023
- PlanespotterA320, since 17 March 2023
- Safaque / Safaque123 / Podcaster7 / TP495 / AAComposer / Drbenzene / InitiumNovum, since 21 March 2023
- Samatics, since 28 March 2023
- Skiyomi, since 21 June 2023
- Luca Poma / LoSpecialista, since 28 June 2023
- Drbug, since 25 July 2023
- 86sedan, since 26 July 2023
- Alex-h, since 8 August 2023
- ParadaJulio, since 8 August 2023
- Ypatch, since 8 August 2023
- Idealigic, since 8 August 2023
- Роман Беккер, since 23 August 2023
- Belteshazzar, since 4 September 2023
- Doxastic1000 / Researcher1000, since 5 September 2023
- OvskMendov1, since 5 September 2023
- Pokelova, since 5 September 2023
- Drummyfish, since 5 September 2023
- Gustin Kelly, since 18 October 2023
- Naleksuh, since 22 November 2023
- Blue Barette Bam, since 25 March 2024
- Mardetanha, since 8 April 2024
- Benoît Prieur, since 13 May 2024
- Nipponese Dog Calvero/KAGE/影武者, since 9 July 2024
- Flamelai, since 11 September 2024
- Anatoly Shariy, since 12 September 2024
- Devoter, since 28 October 2024
- Andrew5, since 5 November 2024
- Christophervincent01, since 20 November 2024
- MidAtlanticBaby, since 2 December 2024