ತಾಂತ್ರಿಕ/ಸುದ್ದಿ/೨೦೨೩/೩೮
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೩೮ (ಸೋಮವಾರ ೧೮ ಸೆಪ್ಟೆಂಬರ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-38
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
ಮೀಡಿಯಾವಿಕಿಯು ಈಗ ಫ್ರಂಟೆಂಡ್ ಕೋಡ್ಗಾಗಿ ಸ್ಥಿರವಾದ ಇಂಟರ್ಫೇಸ್ ನೀತಿಯನ್ನು ಹೊಂದಿದೆ ಅದು ನಾವು ಮೀಡಿಯಾವಿಕಿ ಕೋಡ್ ಮತ್ತು ವಿಕಿ-ಆಧಾರಿತ ಕೋಡ್ ಅನ್ನು ಹೇಗೆ ಅಸಮ್ಮತಿಸುತ್ತೇವೆ (ಉದಾ. ಗ್ಯಾಜೆಟ್ಗಳು ಮತ್ತು ಬಳಕೆದಾರ ಸ್ಕ್ರಿಪ್ಟ್ಗಳು) ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ವಿವರಿಸುತ್ತದೆ. ವಿಷಯ ಮತ್ತು ಚರ್ಚೆಗಳಿಗೆ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದಗಳು. [೧][೨]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೧೯ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೦ ಸೆಪ್ಟಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೧ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು.
- ಸೆಪ್ಟೆಂಬರ್ ೨೦ ರಂದು ಎಲ್ಲಾ ವಿಕಿಗಳನ್ನು ಕೆಲವು ನಿಮಿಷಗಳವರೆಗೆ ಓದಲು-ಮಾತ್ರ ಮಾಡಲಾಗುತ್ತದೆ. ಇದು ೧೪:೦೦ UTC ಸಮಯಕ್ಕೆ ಯೋಜಿಸಲಾಗಿದೆ. [೩]
- Wikimedia URL Shortener ಬಳಸಿಕೊಂಡು ಆ ಪುಟದ ಸಣ್ಣ URL ಅನ್ನು ಒದಗಿಸುವ ಲಿಂಕ್ಅನ್ನು ಸೈಡ್ಬಾರ್ನಲ್ಲಿ ಎಲ್ಲಾ ವಿಕಿಗಳು ಹೊಂದಿರುತ್ತವೆ. [೪]
ಭವಿಷ್ಯದ ಬದಲಾವಣೆಗಳು
ಗ್ರಾಫ್ ವಿಸ್ತರಣೆಯನ್ನು ತನಿಖೆ ಮಾಡುವ ತಂಡವು ಅದನ್ನು ಮರುಸಕ್ರಿಯಗೊಳಿಸುವ ಪ್ರಸ್ತಾಪವನ್ನು ಪೋಸ್ಟ್ ಮಾಡಿದೆ ಮತ್ತು ಆ ತಂಡಕ್ಕೆ ನಿಮ್ಮ ಪ್ರತಿಕ್ರಿಯೆ ಅಗತ್ಯವಿದೆ.
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.