ತಾಂತ್ರಿಕ/ಸುದ್ದಿ/೨೦೨೩/೩೫
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೩೫ (ಸೋಮವಾರ ೨೮ ಆಗಸ್ಟ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-35
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಪ್ಯಾರಾಗ್ರಾಫ್ ಸ್ಪ್ಲಿಟ್ಗಳ ಉತ್ತಮ ವ್ಯತ್ಯಾಸ ನಿರ್ವಹಣೆ ಬದಲಾವಣೆಗಳ ಭಾಗವಾಗಿ, ವಿಭಜನೆಗಳ ಸುಧಾರಿತ ಪತ್ತೆಯನ್ನು ಹೊರತರಲಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ, ನಾವು ಈ ಬೆಂಬಲವನ್ನು group0 ಮತ್ತು group1 ವಿಕಿಗಳಿಗೆ ನಿಯೋಜಿಸಿದ್ದೇವೆ. ಈ ವಾರ ಇದನ್ನು group2 ವಿಕಿಗಳಿಗೆ ನಿಯೋಜಿಸಲಾಗುವುದು. [೧]
- ಎಲ್ಲಾ Special:Contributions ಪುಟಗಳು ಈಗ ಬಳಕೆದಾರರ ಸ್ಥಳೀಯ ಸಂಪಾದನೆ ಎಣಿಕೆ ಮತ್ತು ಖಾತೆಯ ರಚನೆಯ ದಿನಾಂಕವನ್ನು ತೋರಿಸುತ್ತವೆ. [೨]
- ವಿಕಿಸೋರ್ಸ್ ಬಳಕೆದಾರರು
prpbengalicurrency
ಲೇಬಲ್ ಅನ್ನು<pagelist>
ಟ್ಯಾಗ್ ಒಳಗೆ ಪುಟ ಸಂಖ್ಯೆಗಳಾಗಿ ಬಂಗಾಳಿ ಕರೆನ್ಸಿ ಅಕ್ಷರಗಳನ್ನು ಸೂಚಿಸಲು ಬಳಸಬಹುದು. [೩] - ಎರಡು ಪ್ರಾಶಸ್ತ್ಯಗಳನ್ನು ಸ್ಥಳಾಂತರಿಸಲಾಗಿದೆ. "Enable the visual editor" ಆದ್ಯತೆಯನ್ನು ಈಗ ಎಲ್ಲಾ ವಿಕಿಗಳಲ್ಲಿ "Editing" ಟ್ಯಾಬ್ನಲ್ಲಿ ತೋರಿಸಲಾಗುತ್ತದೆ. ಹಿಂದೆ ಇದನ್ನು ಕೆಲವು ವಿಕಿಗಳಲ್ಲಿ "Beta features" ಟ್ಯಾಬ್ನಲ್ಲಿ ತೋರಿಸಲಾಗುತ್ತಿತ್ತು. ಎಲ್ಲಾ ವಿಕಿಗಳಲ್ಲಿ "Use the wikitext mode inside the visual editor, instead of a different wikitext editor" ಪ್ರಾಶಸ್ತ್ಯವನ್ನು ಈಗ "Beta features" ಟ್ಯಾಬ್ ಬದಲಿಗೆ "Editing" ಟ್ಯಾಬ್ನಲ್ಲಿ ತೋರಿಸಲಾಗುತ್ತದೆ. [೪][೫]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೯ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೩೦ ಆಗಸ್ಟ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩೧ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು.
- ವಿಕಿಮೀಡಿಯಾ ಡೆವಲಪರ್ ಖಾತೆಯ ಹೊಸ ಸೈನ್ಅಪ್ಗಳು ವಿಕಿಟೆಕ್ನ ಬದಲು idm.wikimedia.org ನಲ್ಲಿ ನಡೆಯಲಿದೆ. ಹೊಸ ವ್ಯವಸ್ಥೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
- ಎಲ್ಲಾ ಬಲದಿಂದ ಎಡ ಭಾಷೆಯ ವಿಕಿಗಳು, ಅದರ ಜೊತೆಗೆ ಕೊರಿಯನ್, ಅರ್ಮೇನಿಯನ್, ಉಕ್ರೇನಿಯನ್, ರಷ್ಯನ್ ಮತ್ತು ಬಲ್ಗೇರಿಯನ್ ಭಾಷೆಯ ವಿಕಿಪೀಡಿಯಾಗಳು ವಿಕಿಮೀಡಿಯಾ URL ಶಾರ್ಟ್ನರ್ ಬಳಸಿಕೊಂಡು ಆ ಪುಟದ ಚುಟುಕು URL ಅನ್ನು ಒದಗಿಸುವ ಸೈಡ್ಬಾರ್ನಲ್ಲಿ ಲಿಂಕ್ಅನ್ನು ಹೊಂದಿರುತ್ತದೆ. ಈ ವೈಶಿಷ್ಟ್ಯವು ಮುಂದಿನ ವಾರಗಳಲ್ಲಿ ಹೆಚ್ಚಿನ ವಿಕಿಗಳಿಗೆ ಬರಲಿದೆ. [೬]
ಭವಿಷ್ಯದ ಬದಲಾವಣೆಗಳು
- The removal of the DoubleWiki extension is being discussed. This extension currently allows Wikisource users to view articles from multiple language versions side by side when the
<=>
symbol next to a specific language edition is selected. Comments on this are welcomed at the phabricator task. - A proposal has been made to merge the second hidden-categories list (which appears below the wikitext editing form) with the main list of categories (which is further down the page). More information is available on Phabricator; feedback is welcome!
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.