ತಾಂತ್ರಿಕ/ಸುದ್ದಿ/೨೦೨೩/೨೧
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೨೧ (ಸೋಮವಾರ ೨೨ ಮೇ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-21
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಪುಟ ವೀಕ್ಷಕರಿಗೆ "ಇತ್ತೀಚಿನ ಸಂಪಾದನೆಗಳ" ಅವಧಿಯು ಈಗ 30 ದಿನಗಳು. ಇದು ಮೊದಲು 180 ದಿನಗಳು. ಇದು ಸಮುದಾಯ ಬಯಕೆಪಟ್ಟಿ ಸಮೀಕ್ಷೆಯ ಪ್ರಸ್ತಾಪ. [೧]
ಈ ವಾರದ ಮುಂದಿನ ಬದಲಾವಣೆಗಳು
- ವಿಕಿಪೀಡಿಯಾದಲ್ಲಿ ಸುಧಾರಿತ ಪರಿಣಾಮ ಮಾಡ್ಯೂಲ್ ಲಭ್ಯವಿರುತ್ತದೆ. ಪರಿಣಾಮ ಮಾಡ್ಯೂಲ್ ಹೊಸಬರಿಗೆ ಅವರ ವೈಯಕ್ತಿಕ ಮುಖಪುಟದಲ್ಲಿ ಲಭ್ಯವಿರುವ ವೈಶಿಷ್ಟ್ಯವಾಗಿದೆ. ಇದು ಅವರ ಸಂಪಾದನೆಗಳ ಸಂಖ್ಯೆ, ಅವರ ಸಂಪಾದಿತ ಪುಟಗಳು ಎಷ್ಟು ಓದುಗರನ್ನು ಹೊಂದಿವೆ, ಅವರು ಎಷ್ಟು ಧನ್ಯವಾದಗಳನ್ನು ಸ್ವೀಕರಿಸಿದ್ದಾರೆ ಮತ್ತು ಅಂತಹುದೇ ವಿಷಯಗಳನ್ನು ತೋರಿಸುತ್ತದೆ. Special:Impact ಅನ್ನು ಪ್ರವೇಶಿಸುವ ಮೂಲಕವೂ ಇದನ್ನು ನೋಡಬಹುದು. [೨]
- ಮೀಡಿಯಾವಿಕಿ ಹೊಸ ಆವೃತ್ತಿ ೨೩ ಮೇ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೪ ಮೇ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೫ ಮೇ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.