ತಾಂತ್ರಿಕ/ಸುದ್ದಿ/೨೦೨೩/೧೮
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೮ (ಸೋಮವಾರ ೦೧ ಮೇ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-18
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
ವಿಷಯ ಗುಣಲಕ್ಷಣ ಪರಿಕರಗಳು ಅದನ್ನು ಯಾರು ಬರೆದಿದ್ದಾರೆ?, XTools Authorship, ಮತ್ತು XTools Blame ಈಗ ಫ್ರೆಂಚ್ ಮತ್ತು ಇಟಾಲಿಯನ್ ವಿಕಿಪೀಡಿಯಾಗಳನ್ನು ಬೆಂಬಲಿಸುತ್ತವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಸೇರಿಸಲಾಗುವುದು. ಇದು 2023ರ ಸಮುದಾಯ ಬಯಕೆಪಟ್ಟಿ ಸಮೀಕ್ಷೆಯ #7 ಆಶಯವಾಗಿದೆ. [೧][೨][೩]
- Video2commons ಉಪಕರಣವನ್ನು ನವೀಕರಿಸಲಾಗಿದೆ. ಇದು YouTube ಅಪ್ಲೋಡ್ಗಳಿಗೆ ಸಂಬಂಧಿಸಿದ ಹಲವಾರು ದೋಷಗಳನ್ನು ಸರಿಪಡಿಸಿದೆ. [೪]
- Special:Preferences ಪುಟವನ್ನು ಮೊಬೈಲ್ ವೆಬ್ನಲ್ಲಿ ಮರುವಿನ್ಯಾಸಗೊಳಿಸಲಾಗಿದೆ. ಹೊಸ ವಿನ್ಯಾಸವು ಕಡಿಮೆ ಪರದೆಯ ಅಗಲದಲ್ಲಿ ವಿಭಿನ್ನ ವಿಭಾಗಗಳು ಮತ್ತು ಸೆಟ್ಟಿಂಗ್ಗಳನ್ನು ಬ್ರೌಸ್ ಮಾಡಲು ಸುಲಭಗೊಳಿಸುತ್ತದೆ. ನೀವು ಇದೀಗ ಮೊಬೈಲ್ ವೆಬ್ ಸೈಡ್ಬಾರ್ನಲ್ಲಿ ಸೆಟ್ಟಿಂಗ್ಗಳ ಮೆನುವಿನಲ್ಲಿರುವ ಲಿಂಕ್ ಮೂಲಕ ಪುಟವನ್ನು ವೀಕ್ಷಿಸಬಹುದು. [೫]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೨ ಮೇ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೩ ಮೇ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೪ ಮೇ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.