ತಾಂತ್ರಿಕ/ಸುದ್ದಿ/೨೦೨೩/೧೭
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೭ (ಸೋಮವಾರ ೨೪ ಏಪ್ರಿಲ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-17
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- Special:Contributions ನಂತಹ ಪುಟಗಳಲ್ಲಿನ ದಿನಾಂಕ-ಆಯ್ಕೆ ಮೆನುವು ಪ್ರಸ್ತುತ ಮತ್ತು ಭವಿಷ್ಯದ ದಶಕದ ಬದಲಿಗೆ ಪ್ರಸ್ತುತ ಮತ್ತು ಹಿಂದಿನ ದಶಕದಲ್ಲಿರುವ ವರ್ಷ-ಶ್ರೇಣಿಗಳನ್ನು ತೋರಿಸುತ್ತದೆ. ಈ ವೈಶಿಷ್ಟ್ಯದ ವಿನಂತಿಯು 2023ರ ಸಮುದಾಯ ಬಯಕೆಪಟ್ಟಿ ಸಮೀಕ್ಷೆಯಲ್ಲಿ #145ನೆ ಶ್ರೇಣಿಯಲ್ಲಿ ಮತ ಹಾಕಲಾಗಿದೆ. [೧]
ಸಮಸ್ಯೆಗಳು
- ಗ್ರಾಫ್ ವಿಸ್ತರಣೆ ಭದ್ರತಾ ಸಮಸ್ಯೆಗಳ ಕಾರಣ, ಎಲ್ಲಾ ವಿಕಿಮೀಡಿಯಾ ಯೋಜನೆಗಳಲ್ಲಿ ಗ್ರಾಫ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ವಿಕಿಮೀಡಿಯಾ ಫೌಂಡೇಶನ್ ತಂಡಗಳು ಈ ದುರ್ಬಲತೆಗಳನ್ನು ಸರಿಪಡಿಸುವುದರಲ್ಲಿ ಕಾರ್ಯನಿರ್ವಹಿಸುತ್ತಿವೆ. [೨]
- ಕೆಲವು ದಿನಗಳವರೆಗೆ, ವಿಕಿಯ ಮೊಬೈಲ್ ಆವೃತ್ತಿಯಲ್ಲಿ ಕೆಲವು ರೀತಿಯ ಸಂಪಾದನೆಗಳನ್ನು ಉಳಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಸರಿಪಡಿಸಲಾಗಿದೆ. [೩][೪][೫]
ಈ ವಾರದ ಮುಂದಿನ ಬದಲಾವಣೆಗಳು
- ೨೬ ಏಪ್ರಿಲ್ ರಂದು ಎಲ್ಲಾ ವಿಕಿಗಳನ್ನು ಕೆಲವು ನಿಮಿಷಗಳವರೆಗೆ ಓದಲು-ಮಾತ್ರ ಮಾಡಲಾಗುತ್ತದೆ. ಇದು ೧೪:೦೦ UTC ಸಮಯಕ್ಕೆ ಯೋಜಿಸಲಾಗಿದೆ. [೬]
- ಮೀಡಿಯಾವಿಕಿ ಹೊಸ ಆವೃತ್ತಿ ೨೫ ಏಪ್ರಿಲ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೬ ಏಪ್ರಿಲ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೭ ಏಪ್ರಿಲ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ಭವಿಷ್ಯದ ಬದಲಾವಣೆಗಳು
- ಸಂಪಾದನೆ ತಂಡವು ಚರ್ಚಾ ಪುಟ ಯೋಜನೆಯ ಉಪಯುಕ್ತತೆ ವಿಶ್ಲೇಷಣೆಗಾಗಿ ಪ್ರಾಥಮಿಕ ಪರೀಕ್ಷೆಯನ್ನು ಯೋಜಿಸಿದೆ. ಯೋಜಿತ ವಿವರ ಲಭ್ಯವಿವೆ. ನಿಮ್ಮ ವಿಕಿಯನ್ನು ಭಾಗವಹಿಸಲು ಆಹ್ವಾನಿಸಬಹುದು. ದಯವಿಟ್ಟು ಚರ್ಚಾ ಪುಟದಲ್ಲಿ ಮಾಪನ ಯೋಜನೆಗೆ ಸುಧಾರಣೆಗಳನ್ನು ಸೂಚಿಸಿ.
- ವಿಕಿಮೀಡಿಯಾ ಫೌಂಡೇಶನ್ ವಾರ್ಷಿಕ ಯೋಜನೆ 2023-2024 ಕರಡು ಚರ್ಚೆ ಮೇ 19 ರವರೆಗೆ ತೆರೆದಿರುತ್ತದೆ. ಅಂತಿಮ ಯೋಜನೆಯನ್ನು ಜುಲೈ 2023 ರಲ್ಲಿ ಮೆಟಾ-ವಿಕಿಯಲ್ಲಿ ಪ್ರಕಟಿಸಲಾಗುವುದು.
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.