ತಾಂತ್ರಿಕ/ಸುದ್ದಿ/೨೦೨೩/೧೨
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೨ (ಸೋಮವಾರ ೨೦ ಮಾರ್ಚ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-12
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- ಕಳೆದ ವಾರ, ಕೆಲವು ಬಳಕೆದಾರರು ಚಿತ್ರ ಥಂಬ್ನೇಲ್ಗಳನ್ನು ಲೋಡ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ತಪ್ಪಾಗಿ ಸಂಗ್ರಹವಾಗಿರುವ ಚಿತ್ರಗಳ ಸಂಗ್ರಹದಿಂದ ಇದು ಸಂಭವಿಸಿದೆ. [೧]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೨೧ ಮಾರ್ಚ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೨ ಮಾರ್ಚ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೩ ಮಾರ್ಚ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ಬಳಕೆದಾರರ Special:CentralAuth ಪುಟಕ್ಕೆ ಲಿಂಕ್ Special:Contributions ನಲ್ಲಿ ಗೋಚರಿಸುತ್ತದೆ - ಈ ಲಿಂಕ್ ಅನ್ನು ಹಿಂದೆ ಸೇರಿಸಿದ ಕೆಲವು ಬಳಕೆದಾರ ಸ್ಕ್ರಿಪ್ಟ್ಗಳಿಂದ ಸಂಘರ್ಷಗಳನ್ನು ಉಂಟುಮಾಡಬಹುದು. ಈ ವೈಶಿಷ್ಟ್ಯದ ವಿನಂತಿಯು ೨೦೨೩ರ ಸಮುದಾಯ ಬಯಕೆಪಟ್ಟಿ ಸಮೀಕ್ಷೆಯಲ್ಲಿ #೧೭ನೇ ಶ್ರೇಣಿ ಯಲ್ಲಿದೆ.
Special:AbuseFilter ಸಂಪಾದನೆ ಪರದೆ ಮರುಗಾತ್ರಗೊಳಿಸಬಹುದು ಮತ್ತು ಪೂರ್ವನಿಯೋಜಿತವಾಗಿ ದೊಡ್ಡದಾಗಿರುತ್ತದೆ. ಈ ವೈಶಿಷ್ಟ್ಯದ ವಿನಂತಿಯು ೨೦೨೩ರ ಸಮುದಾಯ ಬಯಕೆಪಟ್ಟಿ ಸಮೀಕ್ಷೆಯಲ್ಲಿ #೮೦ನೆ ಶ್ರೇಣಿಯಲ್ಲಿದೆ.
- ನಿರ್ವಾಹಕರು ಬಳಕೆದಾರರನ್ನು ಅನ್ಬ್ಲಾಕ್ ಮಾಡುವಾಗ, ಅನಿರ್ಬಂಧಿಸಲಾದ ಬಳಕೆದಾರರ ಬಳಕೆದಾರರ ಪುಟವನ್ನು ಅವರ ವೀಕ್ಷಣೆ ಪಟ್ಟಿಗೆ ಸೇರಿಸಲು ಹೊಸ ಆಯ್ಕೆ ಇರುತ್ತದೆ. ಇದು Special:Unblock ಮತ್ತು API ಮೂಲಕ ಕೆಲಸ ಮಾಡುತ್ತದೆ. [೨]
ಸಭೆಗಳು
- ನೀವು ವಿಕಿಪೀಡಿಯ ಮೊಬೈಲ್ ಅಪ್ಲಿಕೇಶನ್ಗಳ ತಂಡಗಳೊಂದಿಗೆ ಮುಂದಿನ ಸಭೆಗೆ ಸೇರಬಹುದು. ಈ ಸಭೆಯಲ್ಲಿ ಪ್ರಸ್ತುತ ವೈಶಿಷ್ಟ್ಯಗಳು ಮತ್ತು ಭವಿಷ್ಯದ ಮಾರ್ಗಸೂಚಿಯನ್ನು ಚರ್ಚಿಸಲಾಗುತ್ತದೆ. ಸಭೆಯು ೨೪ ಮಾರ್ಚ್ ೧೭:೦೦ (UTC) ರಂದು ನಡೆಯಲಿದೆ. ವಿವರಗಳು ಮತ್ತು ಹೇಗೆ ಸೇರುವುದು ಎಂದು ಈ ಪುಟದಲ್ಲಿ ನೋಡಿ.
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.