ತಾಂತ್ರಿಕ/ಸುದ್ದಿ/೨೦೨೨/೫೧
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೫೧ (ಸೋಮವಾರ ೧೯ ಡಿಸೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-51
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ತಾಂತ್ರಿಕ ಸುದ್ಧಿ
- ಕ್ರಿಸ್ಮಸ್ ಮತ್ತು ರಜಾದಿನಗಳ ಕಾರಣ ತಾಂತ್ರಿಕ ಸುದ್ದಿಯ ಮುಂದಿನ ಸಂಚಿಕೆಯನ್ನು 9 ಜನವರಿ 2023 ರಂದು ಕಳುಹಿಸಲಾಗುವುದು.
ಇತ್ತೀಚಿನ ಬದಲಾವಣೆಗಳು
- ಬಳಕೆದಾರರ ಕೊಡುಗೆಗಳ ಪುಟದಲ್ಲಿ, ನೀವು 'ರಿವರ್ಟೆಡ್' ನಂತಹ ಟ್ಯಾಗ್ ಅನ್ನು ಸಂಪಾದನೆಗಳಲ್ಲಿ ಫಿಲ್ಟರ್ ಮಾಡಬಹುದು. ಈಗ, ನೀವು ಹಾಗೆ ಟ್ಯಾಗ್ ಮಾಡದ ಎಲ್ಲಾ ಸಂಪಾದನೆಗಳಿಗೂ ಸಹ ಫಿಲ್ಟರ್ ಮಾಡಬಹುದು. ಇದು 2022ರ ಸಮುದಾಯದ ಇಚ್ಛೆಪಟ್ಟಿ ವಿನಂತಿಯಾಗಿದೆ. [೧]
- ಲೇಖನ ಪುಟಗಳಲ್ಲಿ ಶೀರ್ಷಿಕೆಯ ಕೆಳಗೆ ವಿಷಯವನ್ನು ಸೇರಿಸಲು ಗ್ಯಾಜೆಟ್ ಡೆವಲಪರ್ಗಳಿಗೆ ಹೊಸ ಕಾರ್ಯವನ್ನು ಬಳಸಲಾಗಿದೆ. ಇದನ್ನು ಸ್ಥಿರವಾದ API ಎಂದು ಪರಿಗಣಿಸಲಾಗುತ್ತದೆ ಅದು ಎಲ್ಲಾ ಸ್ಕಿನ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಡಾಕ್ಯುಮೆಂಟೇಶನ್ ಲಭ್ಯವಿದೆ. [೨]
- ನಮ್ಮ ಪರೀಕ್ಷಾ ವಿಕಿಗಳಲ್ಲಿ ಒಂದನ್ನು ಈಗ Kubernetes ಇಂದ ಚಾಲಿತವಾದ ಹೊಸ ಮೂಲಸೌಕರ್ಯದಲ್ಲಿ ನಡೆಯುತ್ತಿದೆ (ಇನ್ನಷ್ಟು ಓದಿ). 2023 ರ ಆರಂಭದಲ್ಲಿ ಹೆಚ್ಚಿನ ವಿಕಿಗಳು ಈ ಹೊಸ ಮೂಲಸೌಕರ್ಯಕ್ಕೆ ಬದಲಾಗುತ್ತವೆ. ದಯವಿಟ್ಟು ಪರೀಕ್ಷಿಸಿ ಮತ್ತು ಯಾವುದೇ ಸಮಸ್ಯೆಗಳಿದ್ದರೆ ನಮಗೆ ತಿಳಿಸಿ. [೩]
ಸಮಸ್ಯೆಗಳು
- ಕಳೆದ ವಾರ, ಎಲ್ಲಾ ವಿಕಿಗಳು 9 ನಿಮಿಷಗಳವರೆಗೆ ಯಾವುದೇ ಸಂಪಾದನೆ ನಿರ್ಬಂದಿತವಾಗಿತ್ತು. ಇದು ಡೇಟಾಬೇಸ್ ಸಮಸ್ಯೆಯಿಂದ ಉಂಟಾಗಿದೆ. [೪]
ಈ ವಾರದ ಮುಂದಿನ ಬದಲಾವಣೆಗಳು
- ಈ ವಾರ ಯಾವುದೆ ಹೊಸ ಮಿಡಿಯಾವಿಕಿ ಆವೃತ್ತಿ ಇರುವುದಿಲ್ಲ.
- ಅರೇಬಿಕ್ ("ردّ") ನಂತಹ ಕೆಲವು ಭಾಷೆಗಳಲ್ಲಿ "Reply" ಪದವು ತುಂಬಾ ಚಿಕ್ಕದಾಗಿದೆ. ಇದು ಚರ್ಚೆ ಪುಟಗಳಲ್ಲಿ Discussion tools ಬಟನ್ ಅನ್ನು ಬಳಸಲು ಕಷ್ಟಕರವಾಗಿಸುತ್ತದೆ. ಆ ಭಾಷೆಗಳಿಗೆ ಬಾಣದ ಐಕಾನ್ ಅನ್ನು ಸೇರಿಸಲಾಗುತ್ತದೆ. ಈ ಬೀಟಾ ವೈಶಿಷ್ಟ್ಯವನ್ನು ಅನ್ ಮಾಡಿದ ಸಂಪಾದಕರಿಗೆ ಮಾತ್ರ ಇದು ಗೋಚರಿಸುತ್ತದೆ. [೫] [೬]
ಮುಂದಿನ ಬದಲಾವಣೆಗಳು
- ಸಿಸ್ಟಮ್ ಸಾಫ್ಟ್ವೇರ್ ಅಥವಾ Abuse filter management ಸಿಸ್ಟಮ್ನಿಂದ ಸಂಪಾದನೆಗಳನ್ನು ಸ್ವಯಂಚಾಲಿತವಾಗಿ "ಟ್ಯಾಗ್" ಮಾಡಬಹುದು. ಆ ಟ್ಯಾಗ್ಗಳು ಟ್ಯಾಗ್ಗಳ ಕುರಿತಾದ ಸಹಾಯ ಪುಟಕ್ಕೆ ಲಿಂಕ್ ಮಾಡುತ್ತವೆ. ಶೀಘ್ರದಲ್ಲೇ ಅವರು ಈ ರೀತಿಯಲ್ಲಿ ಟ್ಯಾಗ್ ಮಾಡಲಾದ ಇತರ ಸಂಪಾದನೆಗಳನ್ನು ನೋಡಲು ನಿಮಗೆ ಅವಕಾಶ ಮಾಡಿಕೊಡಲು ಇತ್ತೀಚಿನ ಬದಲಾವಣೆಗಳಿಗೆ ಲಿಂಕ್ ಮಾಡುತ್ತಾರೆ. ಇದು 2022ರ ಸಮುದಾಯದ ಇಚ್ಛೆಪಟ್ಟಿ ವಿನಂತಿಯಾಗಿದೆ. [೭]
- ಖಾಸಗಿ ಘಟನೆ ವರದಿ ಮಾಡುವ ವ್ಯವಸ್ಥೆಯನ್ನು ನಿರ್ಮಿಸಲು ಟ್ರಸ್ಟ್ ಮತ್ತು ಸೇಫ್ಟಿ ಟೂಲ್ಸ್ ತಂಡ ಹೊಸ ಯೋಜನೆಗಳನ್ನು ಹಂಚಿಕೊಂಡಿದೆ. ಈ ವ್ಯವಸ್ಥೆಯು ಸಂಪಾದಕರಿಗೆ ಕಿರುಕುಳ ಅಥವಾ ನಿಂದನೆಗೆ ಒಳಗಾದರೆ ಸಹಾಯ ಕೇಳಲು ಸುಲಭವಾಗುತ್ತದೆ.
- ಜನವರಿ 9, 2023ರ ವಾರದಲ್ಲಿ 2010 ವಿಕಿಟೆಕ್ಸ್ಟ್ ಸಂಪಾದಕ ಪ್ರತಿ ಬಳಕೆದಾರರಿಗೆ ನೈಜ ಸಮಯದ ವಿಕಿಟೆಕ್ಸ್ಟ್ ಪೂರ್ವವೀಕ್ಷಣೆ ಬೀಟಾ ಆದ್ಯತೆಗಲಿಂದ ಹೊರಬರುತ್ತಿದೆ. ಇದು 2010 ವಿಕಿಟೆಕ್ಸ್ಟ್ ಸಂಪಾದಕದಲ್ಲಿ ಟೂಲ್ಬಾರ್ ಮೂಲಕ ಬಳಸಲು ಲಭ್ಯವಿರುತ್ತದೆ. ಈ ವೈಶಿಷ್ಟ್ಯವು 2021ರ ಸಮುದಾಯ ಇಚ್ಛೆಪಟ್ಟಿ ಸಮೀಕ್ಷೆಯ 4 ನೇ ಅತ್ಯಂತ ಜನಪ್ರಿಯ ಆಶಯವಾಗಿದೆ.
ಕಾರ್ಯಕ್ರಮಗಳು
- ನೀವು ಈಗ ವಿಕಿಮೀಡಿಯಾ ಹ್ಯಾಕಥಾನ್ 2023ಗೆ ನೋಂದಾಯಿಸಿಕೊಳ್ಳಬಹುದು, ಇದು ಮೇ 19–21 ರಂದು ಗ್ರೀಸ್ನ ಅಥೆನ್ಸ್ನಲ್ಲಿ ನಡೆಯುತ್ತದೆ. ನೀವು ಜನವರಿ 14 ರವರೆಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.