ತಾಂತ್ರಿಕ/ಸುದ್ದಿ/೨೦೧೭/೪೯
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೪೯ (ಸೋಮವಾರ ೦೪ ಡಿಸೆಂಬರ್ ೨೦೧೭) | ಮುಂದಿನ |
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಈಗ MP3 ಕಡತಗಳನ್ನು ಕಾಮನ್ಸ್'ಗೆ ಅಪ್ಲೋಡ್ ಮಾಡಲು ಸಾಧ್ಯವಿದೆ. MP3 ಕಡತವನ್ನುಅಪ್ಲೋಡ್ ಹಕ್ಕುಗಳೊಂದಿಗಿನ ಬಳಕೆದಾರರು ಮಾತ್ರ ಅಪ್ಲೋಡ್ ಮಾಡಬಹುದು. [೧]
- ನೀವು ಹೊಸ ಫಿಲ್ಟರ್ಗಳನ್ನು ಬಳಸುತ್ತಿದ್ದರೆ ಇತ್ತೀಚಿನ ಬದಲಾವಣೆಗಳಿಗೆ ನೀವು ಲೈವ್ ನವೀಕರಣಗಳನ್ನು ಇದೀಗ ಬಳಸಬಹುದು. ಈ ವೈಶಿಷ್ಟ್ಯವು ನೀವು ಸಕ್ರಿಯಗೊಳಿಸಿದಾಗ ಪ್ರತಿ ಮೂರು ಸೆಕೆಂಡುಗಳಿಗೆ ಫಿಲ್ಟರ್ ಮಾಡಿದ ಇತ್ತೀಚಿನ ಬದಲಾವಣೆಗಳನ್ನು ನವೀಕರಿಸುತ್ತದೆ. [೨]
- ವಿಕಿಮೀಡಿಯ ಯೋಜನೆಗಳಿಗಾಗಿ ಪ್ರಾಯೋಗಿಕ ಆನಿಯನ್ (ಈರುಳ್ಳಿ) ಸೇವೆ ಇದೆ. [೩]
ಈ ವಾರದ ಮುಂದಿನ ಬದಲಾವಣೆಗಳು
- ಒಪೇರಾ ವೆಬ್ ಬ್ರೌಸರ್ನ ಹಳೆಯ ಆವೃತ್ತಿಗಳು ಇನ್ನು ಮುಂದೆ ಬೆಂಬಲಿಸುವುದಿಲ್ಲ. ಅಂದರೆ, ಒಪೆರಾ ವೆಬ್ ಬ್ರೌಸರ್'ನಲ್ಲಿ ಹಳೆಯ ಆವೃತ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ತಾಂತ್ರಿಕ ಅಭಿವೃದ್ಧಿಯನ್ನು ಪರೀಕ್ಷಿಸಲಾಗುವುದಿಲ್ಲ. ನೀವು ಸಮಸ್ಯೆಗಳನ್ನು ಹೊಂದಿದ್ದರೆ ಒಪೇರಾ ೧೫ ಹಾಗು ಮೇಲ್ಪಟ್ಟ ಆವೃತ್ತಿ ಅಥವಾ ಇನ್ನೊಂದು ಬ್ರೌಸರ್ ಬಳಸಿ. [೪]
- ಸುಮಾರು ೧೭೦ ವಿಕಿಗಳು ಲಿಂಟರ್ ವರ್ಗಗಳಲ್ಲಿ ಕಡಿಮೆ ಆದ್ಯತೆ ದೋಷಗಳ ರೆಮೆಕ್ಸ್ ಪಾರ್ಸಿಂಗ್ ಗ್ರಂಥಾಲಯವನ್ನು ಬಳಸಲು ಬದಲಾಗುತ್ತದೆ. ಇದು ಟೈಡಿ ಬದಲಿಯಾಗಿರುತ್ತದೆ. ಜರ್ಮನ್ ಮತ್ತು ಇಟಾಲಿಯನ್ ವಿಕಿಪೀಡಿಯಂತಹ ಕೆಲವು ದೊಡ್ಡ ವಿಕಿಗಳು ಕೂಡ ಈ ಸ್ವಿಚ್ ಮಾಡುತ್ತದೆ. ಇದು ಡಿಸೆಂಬರ್ ೫ ರಂದು ನಡೆಯಲಿದೆ. ಪರಿಹರಿಸಬೇಕಾದ ತಪ್ಪುಗಳನ್ನು ಪರಿಹರಿಸಿದಾಗ ಇತರ ವಿಕಿಗಳನ್ನು ಶೀಘ್ರದಲ್ಲೇ ಬದಲಾಯಿಸುವಂತೆ ಶಿಫಾರಸು ಮಾಡಲಾಗುತ್ತದೆ. ೨೦೧೮ರ ಮಧ್ಯದಲ್ಲಿ ಟೈಡಿಯನ್ನು ತೆಗೆದುಹಾಕಲಾಗುತ್ತದೆ. [೫][೬]
- ಮೀಡಿಯಾವಿಕಿ ಹೊಸ ಆವೃತ್ತಿ ೫ ಡಿಸೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೬ ಡಿಸೆಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೭ ಡಿಸೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಗೋಚರಿಸುತ್ತದ್ದೆ.
ಸಭೆಗಳು
- ನೀವು IRCಯಲ್ಲಿ ಸಂಪಾದನೆ ತಂಡದ ಸಭೆಯನ್ನು ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ನೀವು ಅತ್ಯಂತ ಮುಖ್ಯ ಎಂದು ಭಾವಿಸುವ ದೋಷಗಳನ್ನು ಅಭಿವರ್ಧಕರಿಗೆ ಹೇಳಬಹುದು. ಸಭೆಯು ೫ ಡಿಸೆಂಬರ್ ರಂದು 19:30 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
- ನೀವು IRC ಯಲ್ಲಿ ತಾಂತ್ರಿಕ ಸಲಹೆಯ ಸಭೆಯನ್ನು ಸೇರಬಹುದು. ಸಭೆಯಲ್ಲಿ ನೀವು ಸ್ವಯಂಸೇವಕ ಅಭಿವರ್ಧಕರ ಸಲಹೆ ಕೇಳಬಹುದು. ಸಭೆಯು ೬ ಡಿಸೆಂಬರ್ ರಂದು 15:00 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಭವಿಷ್ಯದ ಬದಲಾವಣೆಗಳು
- ೨೦೧೭ ಸಮುದಾಯ ಬಯಕೆಪಟ್ಟಿಗೆ ಸಮೀಕ್ಷೆಯಲ್ಲಿ ಸಮುದಾಯ ತಾಂತ್ರಿಕ ತಂಡವು ಮುಂದಿನ ವರ್ಷ ಏನು ಕೆಲಸ ಮಾಡುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ೧೦ ಡಿಸೆಂಬರ್ವರೆಗೆ ನೀವು ಸಮೀಕ್ಷೆಯ ಪುಟದಲ್ಲಿ ಮತ ಹಾಕಬಹುದು. ೨೦೧೬ ಫಲಿತಾಂಶಗಳ ಪುಟದಲ್ಲಿ ಕಳೆದ ವರ್ಷದ ಬಯಕೆ ಪಟ್ಟಿ ಏನಾಯಿತು ಎಂಬುದನ್ನು ನೀವು ನೋಡಬಹುದು.
- ವಿಕಿಮೀಡಿಯ ಫೌಂಡೇಶನ್'ನ ಸಮುದಾಯ ಲಿಯಾಸನ್ಸ್(ಸಂಪರ್ಕ) ತಂಡವು ಸಕ್ರಿಯ ತಾಂತ್ರಿಕ ರಾಯಭಾರಿಗಳನ್ನು ಹುಡುಕುತ್ತಿದ್ದಾರೆ. ವಿಕಿಮೀಡಿಯಾ ಸಮುದಾಯಗಳಿಗೆ ಹೊಸ ವೈಶಿಷ್ಟ್ಯಗಳ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ತಿಳಿಸುವುದು ಈ ರಾಯಭಾರಿಗಳ ಉದ್ದೇಶ.
. [೭]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ, ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ • ಚಂದಾದಾರರಾಗಿ.