Jump to content

Fundraising/Translation/Email 1/kn

From Meta, a Wikimedia project coordination wiki
This page is a translated version of the page Fundraising/Translation/Email 1 and the translation is 100% complete.

ದಯವಿಟ್ಟು ವಿಕಿಪೀಡಿಯಾದ ಸಂಸ್ಥಾಪಕರ ವೈಯಕ್ತಿಕ ಮನವಿಯನ್ನು ಓದಿರಿ

ಪ್ರಿಯ

ಪ್ರಿಯ ದಾನಿಗಳೆ,

ಧನ್ಯವಾದ, ವಿಕಿಪೀಡಿಯಾವನ್ನು ಆನ್-ಲೈನ್ ಮತ್ತು ಜಾಹೀರಾತು-ಮುಕ್ತವಗೈರಿಸಲು ಸಹಾಯ ಮಾಡಿದ್ದಕ್ಕಾಗಿ. ನಾವು ಚಂದಾ ಕೇಳಿ, ಬಹುತೇಕ ಒಂದು ವರ್ಷವಾಗಿದೆ.[̩https://donate.wikimedia.org ಇದು ನಿಮ್ಮ ವಾರ್ಷಿಕ ಜ್ಞಾಪನೆ].

ನಮ್ಮ ಹಿಂದಿನ ಎಲ್ಲಾ ದಾನಿಗಳೂ ಇಂದು ಮತ್ತೆ ಚಂದಾ ಇತ್ತರೆ, ಈ ವರ್ಷಪೂರ್ತಿ ನಾವು ಚಂದಾ ಎತ್ತುವ ಬಗ್ಗೆ ಯೋಚಿಸುವ ಅಗತ್ಯ ಇರುವುದಿಲ್ಲ. ದಯವಿಟ್ಟು ವಿಕಿಪೀಡಿಯಾವನ್ನು ಉತ್ತಮಗೊಳಿಸಲು ಸಹಾಯ ಮಾಡಿರಿ.

ನಾವು ವಿಶ್ವದ ನಂ.೫ನೆಯ ಜಾಲತಾಣವನ್ನು ನಡೆಸುತ್ತಿರುವ ಸಣ್ಣ ಸ್ವಯಂಸೇವಾ ಸಂಸ್ಥೆ. ನಮ್ಮಲ್ಲಿ ಕೇವಲ ೨೦೦ ಸಿಬ್ಬಂದಿ ಇದ್ದರೂ ೫೦ ಕೋಟಿ ಬಳಕೆದಾರರಿಗೆ ಸೇವೆ ಒದಗಿಸುತ್ತಿದ್ದೇವೆ, ಮತ್ತು ಇತರೆ ಅಗ್ರ ಜಾಲತಾಣಗಳ ರೀತಿಯ ವೆಚ್ಚಗಳನ್ನು ನಿಭಾಯಿಸುತ್ತೇವೆː ಸರ್ವರ್, ವಿದ್ಯುತ್, ಕಾರ್ಯಕ್ರಮಗಳು ಮತ್ತು ಜನಗಳು.

ವಿಕಿಪೀಡಿಯಾ ಸ್ವಲ್ಪ ವಿಶೇಷವಾದುದು. ಅದು ಗ್ರಂಥಾಲಯ ಅಥವಾ ಸಾರ್ವಜನಿಕ ಉದ್ಯಾನವನದ ಥರಹ. ಅದು ಮನಸ್ಸಿಗೆ ದೇವಾಲಯದ ರೀತಿ, ನಾವೆಲ್ಲರೂ ಹೋಗಿ ಯೋಚಿಸಿ ಮತ್ತು ಕಲಿಯುವ ಸ್ಥಳ.

ನಮ್ಮ ಸ್ವಾತಂತ್ರ್ಯವನ್ನು ಕಾಪಾಡುವ ಸಲುವಾಗಿ, ನಾವು ಎಂದೂ ಜಾಹೀರಾತುಗಳನ್ನು ಪ್ರದರ್ಶಿಸುವುದಿಲ್ಲ. ಸರ್ಕಾರಗಳಿಂದ ವಂತಿಗೆ ಪಡೆಯುವುದಿಲ್ಲ. ವಿಕಿ-ಓದುಗರ ಬಳುವಳಿಯಿಂದಲೇ ಬದುಕಿದ್ದೇವೆ. ಇದೀಗ, ಬೇಡುವ ಸಮಯ ಬಂದಿದೆ.

ವಿಕಿಪೀಡಿಯದಿಂದ ನಿಮಗೆ ಪ್ರಯೋಜನ ದೊರೆತಿದ್ದರೆ, ದಯವಿಟ್ಟು ಅದನ್ನು ಒಂದು ವರ್ಷದ ಮಟ್ಟಿಗೆ ಆನ್ ಲೈನ್ ಆಗಿಯೇ ಇಡಲಿಕ್ಕೆ, ಜಾಹೀರಾತು-ಮುಕ್ತವಾಗಿ ಇಡಲಿಕ್ಕೆ ಒಂದು ನಿಮಿಷ ವ್ಯಯಮಾಡಿರಿ.

https://donate.wikimedia.org

ಧನ್ಯವಾದ,

ಜಿಮ್ಮಿ ವೇಲ್ಸ್
ವಿಕಿಪೀಡಿಯಾದ ಸಂಸ್ಥಾಪಕ


ವಿಕಿಮೀಡಿಯಾ ಫೌಂಡೇಷನ್ನಿನ ಅತ್ಯಮೂಲ್ಯ ದಾನಿಯಾದ ಕಾರಣ ನಿಮಗೆ ಈ ಈಮೇಲ್ ತಲುಪುತ್ತಿದೆ. ಭವಿಷ್ಯದಲ್ಲಿ ವಿಕಿಮೀಡಿಯಾ ಫೌಂಡೇಷನ್ ನಿಂದ ನಿಮಗೆ ಈಮೇಲ್ ಬರುವುದು ಇಷ್ಟವಿಲ್ಲದೆ ಇದ್ದರೆ, ಕ್ಷಣಾರ್ಧದಲ್ಲಿಯೇ ಈಮೇಲ್ ತಲುಪುವಿಕೆಯನ್ನು ನಿಲ್ಲಿಸಿರಿ

Wikimedia Foundation, Inc.
P.O. Box 98204
Washington, DC 20090-8204
United States of America